Loading video

Kodi Mutt Swamiji: ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು

| Updated By: Ganapathi Sharma

Updated on: Apr 07, 2025 | 12:19 PM

ಕೋಡಿಮಠ ಸ್ವಾಮೀಜಿ ಭವಿಷ್ಯ: ಕೋಡಿಮಠ ಸ್ವಾಮೀಜಿ ಆಗಾಗ ರಾಜಕೀಯ ವಿಚಾರಗಳ ಬಗ್ಗೆ ಭವಿಷ್ಯ, ಮುನ್ಸೂಚನೆ ನೀಡುತ್ತಿರುತ್ತಾರೆ. ಅವರ ಮಾರ್ಮಿಕ ಮಾತುಗಳ ಬಗ್ಗೆ ಜನರಲ್ಲಿಯೂ ಅಷ್ಟೇ ಕುತೂಹಲವಿರುತ್ತದೆ. ಇದೀಗ ಕೋಡಿಮಠ ಶ್ರೀಗಳು ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ. ಅವರ ಮಾತಿನ ವಿಡಿಯೋ ಇಲ್ಲಿದೆ.

ವಿಜಯಪುರ, ಏಪ್ರಿಲ್ 7: ಉತ್ತರ ಕರ್ನಾಟಕ ಭಾಗದಿಂದ ಎಂಬಿ ಪಾಟೀಲ್ ಮುಖ್ಯಮಂತ್ರಿ ಆಗಲಿ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ವಿಜಯಪುರ‌ ಜಿಲ್ಲೆ ಆಲಮೇಲ ತಾಲೂಕಿನ ಕಡನಿ ಗ್ರಾಮದಲ್ಲಿ ಭಾನುವಾರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸ್ವಾಮೀಜಿ, ಮೊನ್ನೆ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುತ್ತಿದ್ದೆ. ಈ ವೇಳೆ ಉತ್ತರ ಕರ್ನಾಟಕದಿಂದ ಯಾರಾದರು ಸಿಎಂ ಆಗಬಹುದು ಎಂದರೆ, ಎಂಬಿ ಪಾಟೀಲ್ ಆಗಲಿ ಎಂದಿದ್ದೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲದೆ, ಎಂಬಿ ಪಾಟೀಲ್ ಅವರನ್ನು ಹಾಡಿಹೊಗಳಿದರು. ಪ್ರಾಕೃತಿಕ ವಿಕೋಪಗಳ ಬಗ್ಗೆಯೂ ಸ್ವಾಮೀಜಿ ಮುನ್ಸೂಚನೆ ನೀಡಿದ್ದು, ವಿವರಗಳಿಗೆ ವಿಡಿಯೋ ನೋಡಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 07, 2025 12:17 PM