Kodi Sri Prediction: ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು

Updated on: Mar 02, 2025 | 1:57 PM

ಯುಗಾದಿ ಸಮೀಪಿಸುತ್ತಿದ್ದಂತೆಯೇ ಸ್ವಾಮೀಜಿಗಳ ಭವಿಷ್ಯವಾಣಿಗಳಿಗೆ ಜನರು ಕಾತರದಿಂದ ಕಾಯುತ್ತಿದ್ದಾರೆ. ಭಾರತೀಯರ ಹೊಸ ವರ್ಷ ಅಂದ್ರೆನೇ ಯುಗಾದಿ. ಹೀಗಾಗಿ ಈ ಹೊಸ ವರ್ಷದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ವಿವಿಧ ಮಠದ ಸ್ವಾಮೀಜಿಗಳು ಪ್ರತಿ ವರ್ಷ ಭವಿಷ್ಯ ನುಡಿದುಕೊಂಡು ಬರುತ್ತಿದ್ದಾರೆ. ಅದರಂತೆ ಯುಗಾದಿ ಸಮೀಪದಲ್ಲೇ ಕೋಡಿಶ್ರೀ ಸಹ ಕರ್ನಾಟಕದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಯಾದಗಿ, (ಮಾರ್ಚ್ 02): ಯುಗಾದಿ ಹೊಸ್ತಿಲಲ್ಲೇ ಕರ್ನಾಟಕದ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಯಾದಗಿಯಲ್ಲಿ ಮಾತನಾಡಿದ ಶ್ರೀಗಳು, ನಮ್ಮಲ್ಲಿ ಎರಡು ಭಾಗ ಮಾಡುತ್ತಾರೆ. ಒಂದು ಸಂಕ್ರಾಂತಿ ಭವಿಷ್ಯ ಇನ್ನೊಂದು ಯುಗಾದಿ ಭವಿಷ್ಯ ಅಂತ. ಸಂಕ್ರಾಂತಿ ಭವಿಷ್ಯ ರಾಜರುಗಳಿಗೆ ಮಹಾರಾಜರುಗಳಿಗೆ ದೊಡ್ಡ ವ್ಯಾಪಾರಸ್ಥರಿಗೆ ಸಂಕ್ರಾಂತಿ ಭವಿಷ್ಯ ಇರುತ್ತೆ. ಯುಗಾದಿ ಮೇಲೆ ಬರೋದು ಚಂದ್ರಮಾನ ಯುಗಾದಿ. ಚಂದ್ರನನ್ನ ಆಧಾರವಾಗಿಟ್ಟುಕೊಂಡು ಮಳೆ,ಬೆಳೆ ,ಆಳ್ವಿಕೆಗಳು,ರಾಜರುಗಳು,ಅವಘಡಗಳು,ದುಖ ದುಮ್ಮಾನಗಳು,ಸಂತೋಷಗಳು ಇದರ ಮೇಲೆ ಹೇಳೆದೋ ಯುಗಾದಿ ಸಮಸ್ರಫಲ. ಯುಗಾದಿ ಇನ್ನೊಂದು ತಿಂಗಳು ದೂರವಿದೆ. ಅದರ ಮೇಲೆ ಹೇಳೋದು ಸ್ವಲ್ಪ ಕಷ್ಟ. ನಮ್ಮ ಪ್ರಕಾರ ಬರುವಂತ ದಿನಗಳಲ್ಲಿ ಕರ್ನಾಟಕಕ್ಕೆ ತೊಂದರೆ ತಾಪತ್ರೆಗಳಿಲ್ಲ. ಮಳೆ ಬೆಳೆ ಚೆನ್ನಾಗಿಯಿದೆ ಸುಭಿಕ್ಷಿತೆ ಇರುತ್ತೆ ಯಾವುದೇ ತೊಂದರೆಗಳು ಕಾಣುತ್ತಿಲ್ಲ. ಯುಗಾದಿ ಬಳಿಕ ಹೇಳುವೆ ಎಂದಿದ್ದಾರೆ.