ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಸ್ಥಳ ಪರಿಶೀಲನೆ ಬಳಿಕ ಹೇಳಿದ್ದಿಷ್ಟು

Edited By:

Updated on: Dec 29, 2025 | 5:43 PM

ಕೋಗಿಲು ಲೇಔಟ್‌ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣದ ಸ್ಥಳ ಪರಿಶೀಲನೆ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಕಸದ ಗುಂಡಿ ಮೇಲೆ ನಿರ್ಮಿಸಿದ ಮನೆಗಳ ಬಗ್ಗೆ ರಾಜಕೀಯ ಆರೋಪಗಳು ಕೇಳಿಬಂದಿವೆ. ನಿವಾಸಿಗಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ ಡಿಸಿಎಂ, ಬೆಂಗಳೂರು ಸ್ವಚ್ಛತೆಗೂ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.

ಬೆಂಗಳೂರು, ಡಿಸೆಂಬರ್​ 29: ಅನಧಿಕೃತ ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಗಿಲು ಲೇಔಟ್​ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ, ಸಂತ್ರಸ್ತರ ಮನವಿ ಆಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಶಾಸಕರು ಕೂಡ ಗಮನಕ್ಕೆ ತಂದು ಮಾತನಾಡಿದ್ದಾರೆ. ಕಸದ ಗುಂಡಿ ಇತ್ತು, ಅದರ ಮೇಲೆಯೇ ಮನೆ ಕಟ್ಟಿಕೊಂಡಿದ್ದಾರೆ, ಆದರೆ ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕೇರಳ ಸಿಎಂ ಆದಿಯಾಗಿ ಎಲ್ಲರೂ ರಾಜಕೀಯ ಬೆರೆಸುತ್ತಿದ್ದಾರೆ. ಇಲ್ಲಿನ ನಿವಾಸಿಗಳು ನನ್ನ ಕಂಡ ಕೂಡಲೇ ಜೈಕಾರ ಹಾಕಿದರು. ನಮ್ಮದು ತಪ್ಪು ಇದ್ದರೆ ಧಿಕ್ಕಾರ ಕೂಗಬೇಕಿತ್ತು ಅಲ್ವಾ. ಯಾರಿಗೆ ತೊಂದರೆ ಆಗಿದೆಯೋ ಅವರಿಗೆ ನ್ಯಾಯ ಒದಗಿಸುತ್ತೇವೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Dec 29, 2025 05:39 PM