ಕೋಲಾರ ಬಸ್ ನಿಲ್ದಾಣ ನಾಯಿಗಳ ತಂಗುದಾಣವಾಗಿ ಮಾರ್ಪಟ್ಟಿದೆ, ಸಂಬಂಧಪಟ್ಟವರು ಸುಮ್ಮನಿದ್ದಾರೆ!
ಈ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಬಸ್ಸುಗಳಿಗಿಂತ ನಾಯಿಗಳ ಸಂಖ್ಯೆಯೇ ಹೆಚ್ಚೆನಿಸುತ್ತದೆ. ಇದೇನು ಈ ದಿನದ ಸ್ಪೆಷಲ್ ಅಲ್ಲ ಮಾರಾಯ್ರೇ, ಪ್ರತಿನಿತ್ಯ ಯಾವುದೇ ಸಮಯದಲ್ಲಿ ಕಂಡು ಬರುವ ದೃಶ್ಯ. ನಾಯಿಗಳು ಎಲ್ಲರಿಗೂ ಇಷ್ಟವಾಗಲಾರವು. ಕೆಲವರಿಗೆ ನಾಯಿಗಳನ್ನು ನೋಡಿದರೆ ಹೆದರಿಕೆ ಆಗುತ್ತದೆ
ಕೋಲಾರ ನಾಯಿ ನಿಲ್ದಾಣಕ್ಕೆ ನಿಮಗೆ ಸ್ವಾಗತ, ನೀವು ಇಲ್ಲಿಂದ ಬೆಂಗಳೂರಿಗೆ ಹೋಗುವ ಬಸ್ಸಿನ ಮಾಹಿತಿ ಬೇಕಾದರೆ ಮೇಲ್ಭಾಗದಲ್ಲಿ ಕೂತಿರುವ ನಾಯಿಯನ್ನು ಕೇಳಿ, ಮೈಸೂರಿಗೆ ಹೋಗುವ ಬಸ್ಸಿನ ವೇಳೆ ತಿಳಿಯಬೇಕಾದರೆ ಮೆಟ್ಟಿಲ ಮೇಲೆ ಕೂತಿರುವ ನಾಯಿಯನ್ನು ವಿಚಾರಿಸಿ, ಎಲ್ಲೂ ಹೋಗಬೇಕಿಲ್ಲ ಸ್ವಲ್ಪ ಹೊತ್ತು ವಿಶ್ರಮಿಸಿಕೊಳ್ಳಬೇಕಿದ್ದರೆ, ಇಲ್ಲಿ ಓಡಾಡಿಕೊಂಡಿರುವ ನಾಯಿಯಿಂದ ಅನುಮತಿ ಪಡೆಯಿರಿ, ಧನ್ಯವಾದಗಳು! ಕೋಲಾರ ಬಸ್ ನಿಲ್ದಾಣದಲ್ಲಿ (Kolar bus terminus) ಹೀಗೆ ಅನೌನ್ಸ್ ಮೆಂಟ್ ಗಳನ್ನು ಮಾಡಿದರೆ ಚೆನ್ನಾಗಿರುತ್ತದೆ ಅಂತ ನಾವು ಅಂದುಕೊಳ್ಳುತ್ತೇವೆ. ಹಾಗಂತ ನಾಯಿಗಳ (Dogs) ಬಗ್ಗೆ ಇಲ್ಲಸಲ್ಲದ್ದು ಮಾತಾಡಲೂ ಆಗದು ಮಾರಾಯ್ರೇ. ಪೇಟಾ (PETA) ಮತ್ತು ಪ್ರಾಣಿದಯಾ ಸಂಘಗಳಿಗೆ ಸಿಟ್ಟು ಬರುತ್ತದೆ.
ಆದರೆ, ವಾಸ್ತವಾಂಶ ನಿಮ್ಮ ಕಣ್ಣೆದಿರುಗಿದೆ. ಈ ನಿಲ್ದಾಣದಲ್ಲಿ ಪ್ರಯಾಣಿಕರು ಮತ್ತು ಬಸ್ಸುಗಳಿಗಿಂತ ನಾಯಿಗಳ ಸಂಖ್ಯೆಯೇ ಹೆಚ್ಚೆನಿಸುತ್ತದೆ. ಇದೇನು ಈ ದಿನದ ಸ್ಪೆಷಲ್ ಅಲ್ಲ ಮಾರಾಯ್ರೇ, ಪ್ರತಿನಿತ್ಯ ಯಾವುದೇ ಸಮಯದಲ್ಲಿ ಕಂಡು ಬರುವ ದೃಶ್ಯ. ನಾಯಿಗಳು ಎಲ್ಲರಿಗೂ ಇಷ್ಟವಾಗಲಾರವು. ಕೆಲವರಿಗೆ ನಾಯಿಗಳನ್ನು ನೋಡಿದರೆ ಹೆದರಿಕೆ ಆಗುತ್ತದೆ. ವಯೋವೃದ್ಧರನ್ನು ನಾಯಿಗಳು ಏನಾದರೂ ಅಟ್ಟಿಸಿಕೊಂಡು ಹೋದರೆ ಏನು ಗತಿ?
ಸ್ಥಳೀಯ ಜನ ವಿಷಯವನ್ನು ಕೋಲಾರ ನಗರಸಭೆ ಮತ್ತು ಬಸ್ ನಿಲ್ದಾಣ ಹಾಗೂ ಡಿಪೋ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರ್ಯಾರೂ ಕ್ರಮ ತೆಗೆದುಕೊಂಡಿಲ್ಲ. ಈ ವರದಿ ನೋಡಿದ ಬಳಿಕವಾದರೂ ಅವರು ಎಚ್ಚೆತ್ತುಕೊಂಡು ನಾಯಿಗಳಿಗೆ ಪ್ರತ್ಯೇಕ ತಂಗುದಾಣ ಮಾಡಿಕೊಟ್ಟರೆ, ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರಾಗುತ್ತಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.