ತುಮಕೂರು: ಈ ಅಪಘಾತದಲ್ಲಿ ಕೇವಲ ಸಣ್ಣಪುಟ್ಟ ಗಾಯಗಳಿಂದ ಪಾರಾದ ಬೈಕ್ ಸವಾರರು ನಿಜಕ್ಕೂ ಅದೃಷ್ಟವಂತರು!
ಕಾರು ಗುದ್ದಿದ ಬೈಕ್ ಗಿಂತ ಮುಂದೆ ಇದ್ದ ಬೈಕ್ ಸವಾರರು ಸಹ ಆಶ್ಚರ್ಯಕರ ರೀತಿಯಲ್ಲಿ ಪಾರಾಗುತ್ತಾರೆ. ಅವರೇನಾದರೂ ಕಾರಿಗೆ ಗುದ್ದಿದ್ದರೆ ಅದು ಘಾತಕವಾಗಿ ಸಾಬೀತಾಗುತಿತ್ತು. ಕಾರು ಬೈಕಿಗೆ ಢಿಕ್ಕಿ ಹೊಡೆದು ಡಿವೈಡರ್ ಗೆ ಗುದ್ದಿದ ಮೇಲೆ ನಿಲುಗಡೆಗೆ ಬರುತ್ತದೆ.
Tumakuru: ರೆಕ್ಲೆಸ್ ಡ್ರೈವಿಂಗ್ ಅಂದರೆ ಇದೇ ಇರಬೇಕು. ತುಮಕೂರಿನ ವರ್ತುಲ ರಸ್ತೆಯಲ್ಲಿನ (Tumakuru Ring Road) ಸಿಸಿಟಿವಿಯೊಂದರಲ್ಲಿ (CCTV) ಸೆರೆಯಾಗಿರುಬ ದೃಶ್ಯ ನೋಡಿ. ಸೋಜಿಗದ ಸಂಗತಿಯೆಂದರೆ ಕಾರು ಭಾರಿ ವೇಗದಿಂದ ಒನ್ ವೇನಲ್ಲಿ (one way) ನುಗ್ಗಿ ಒಂದು ಬೈಕ್ ಗೆ ಗುದ್ದಿದರೂ ಬೈಕ್ ಸವಾರರಿಗೆ ಮತ್ತು ಕಾರಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳು ಮಾತ್ರ ಅಗಿರೋದು. ಇದು ನಿಜಕ್ಕೂ ಪವಾಡಸದೃಶ ಪಾರು ಮಾರಾಯ್ರೇ. ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದ ಚಾಲಕ ಬ್ರೇಕ್ ಅದುಮಿದಾಗ ಬಹಳ ವೇಗದಲ್ಲಿದ್ದ ಕಾರು ಕಿರುಗುಟ್ಟುತ್ತಾ ಎಡಕ್ಕೆ ತಿರುಗಿಕೊಳ್ಳುತ್ತದೆ. ಅದರೆ ಅದು ನಿಲ್ಲುವುದಿಲ. ಬೈಕ್ ಗೆ ಗುದ್ದಿ ರಸ್ತೆಯ ಮತ್ತೊಂದು ಬದಿಗೆ ಜಾರುತ್ತದೆ.
ಕಾರು ಗುದ್ದಿದ ಬೈಕ್ ಗಿಂತ ಮುಂದೆ ಇದ್ದ ಬೈಕ್ ಸವಾರರು ಸಹ ಆಶ್ಚರ್ಯಕರ ರೀತಿಯಲ್ಲಿ ಪಾರಾಗುತ್ತಾರೆ. ಅವರೇನಾದರೂ ಕಾರಿಗೆ ಗುದ್ದಿದ್ದರೆ ಅದು ಘಾತಕವಾಗಿ ಸಾಬೀತಾಗುತಿತ್ತು. ಕಾರು ಬೈಕಿಗೆ ಢಿಕ್ಕಿ ಹೊಡೆದು ಡಿವೈಡರ್ ಗೆ ಗುದ್ದಿದ ಮೇಲೆ ನಿಲುಗಡೆಗೆ ಬರುತ್ತದೆ.
ಕೆಳಗೆ ಬಿದ್ದ ಬೈಕ್ ಸವಾರರಿಗೆ ಹೆಚ್ಚಿನ ಗಾಯಗಳಾಗಿಲ್ಲ, ಅಪಘಾತಕ್ಕಿಂತ ಹೆಚ್ಚು ಆಘಾತದಿಂದ ಸಾವರಿಸಿಕೊಳ್ಳಲು ಅವರಿಗೆ ಸಮಯ ಹಿಡಿಯುತ್ತದೆ. ಇಬ್ಬರೂ ಎದ್ದು ನಿಲ್ಲುತ್ತಾರೆ ಮತ್ತು ಅಷ್ಟರಲ್ಲಿ ಬೇರೆಯವರು ಅವರ ನೆರವಿಗೆ ಧಾವಿಸುತ್ತಾರೆ. ತುಮಕೂರಿನ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣವನ್ನು ದಾಖಲಿಕೊಳ್ಳಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.