ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್

Updated on: Apr 21, 2025 | 9:10 PM

ಕೋಲಾರದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ದಾಖಲಾತಿ ಹೆಚ್ಚಳಕ್ಕಾಗಿ ಶಿಕ್ಷಕರು ವಿನೂತನವಾಗಿ ಪ್ರಚಾರ ಮಾಡುತ್ತಿದ್ದಾರೆ. ಬಂಗಾರಪೇಟೆ ತಾಲೂಕಿನ ದೇವಗಾನಹಳ್ಳಿ ಶಾಲೆ ಇದಕ್ಕೆ ಮಾದರಿ. ಉಚಿತ ಶಿಕ್ಷಣ, ಖಚಿತ ಕಲಿಕೆ, ಗುಣಮಟ್ಟದ ಭರವಸೆಗಳೊಂದಿಗೆ, ಹಲವು ಚಟುವಟಿಕೆಗಳು, ಸಮವಸ್ತ್ರ, ಶೂ, ಸ್ಮಾರ್ಟ್ ಬೋರ್ಡ್‌ಗಳಂತಹ ಸೌಲಭ್ಯಗಳನ್ನು ಪ್ರಚಾರ ಮಾಡಲಾಗುತ್ತಿದೆ. ಮನೆಮನೆಗೆ ಭೇಟಿ ನೀಡಿ ದಾಖಲಾತಿಗೆ ಮನವಿ ಮಾಡಲಾಗುತ್ತಿದೆ.

ಕೋಲಾರ, ಏಪ್ರಿಲ್​ 21: ಸರ್ಕಾರಿ ಶಾಲೆಯ ದಾಖಲಾತಿ ಹೆಚ್ಚಳಕ್ಕೆ ಕೋಲಾರದಲ್ಲಿ ಶಾಲಾ ಶಿಕ್ಷಕರು ಡಿಫರೆಂಟ್ ಆಗಿ ಕ್ಯಾಂಪೇನ್ ಮಾಡಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೇವಗಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇತರ ಶಾಲೆಗಳಿಗೆ ಮಾದರಿಯಾಗಿದೆ. ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಪಟ್ಟಿ ಜೊತೆಗೆ, ಮಕ್ಕಳ ಕೌಶಲ್ಯ ಅಭಿವೃದ್ಧಿ ಕುರಿತು ಶಿಕ್ಷಕರು ಪ್ರಚಾರ ಮಾಡುತ್ತಿದ್ದಾರೆ. ನಮ್ಮ ನಡೆ ನೂರರ ದಾಖಲಾತಿ ಕಡೆ ಎಂಬ ಘೋಷ ವಾಕ್ಯ. ಶಿಕ್ಷಣ ಉಚಿತ, ಕಲಿಕೆ ಖಚಿತ, ಗುಣಮಟ್ಟ ನಿಶ್ಚಿತ ಎಂದು ಕ್ಯಾಂಪೇನ್​ ಮಾಡಿದ್ದಾರೆ.

ಹಲವು ಚಟುವಟಿಕೆ, ಸಮವಸ್ತ್ರ, ಶೂ, ಸ್ಮಾರ್ಟ್ ಬೋರ್ಡ್ ಸೇರಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣವಿದೆ. ಸರ್ಕಾರ ರಜೆ ನೀಡಿದರೂ ತಮ್ಮ ಮಕ್ಕಳ ಏಳಿಗೆಗೆ ಶಿಕ್ಷಕರ ಶ್ರಮ ಪಡುತ್ತಾರೆ ಎಂದು ಶಿಕ್ಷಕರು ಗ್ರಾಮದ ಮನೆ ಮನೆಗೆ ತೆರಳಿ ಸರ್ಕಾರಿ ಶಾಲೆಗೆ ಸೇರಿಸಿ ಎಂದು‌ ಮನವಿ ಮಾಡುತ್ತಿದ್ದಾರೆ.