ಕೋಲಾರ: ಶಾಂತಿ ಸೌಹಾರ್ದತೆಗಾಗಿ ಗಾಂಧಿ ವೇಷ ತೊಟ್ಟು ಮೌನಾಚರಣೆ
ಕೆಜಿಎಫ್ ತಾಲೂಕು ಕ್ಯಾಸಂಬಳ್ಳಿ ಗ್ರಾಮದ ಶ್ರೀನಿವಾಸರೆಡ್ಡಿ ಎಂಬುವವರು ಶಾಂತಿ ಸೌಹಾರ್ದತೆಗಾಗಿ 12 ಗಂಟೆಗಳ ಕಾಲ ಗಾಂಧಿ ವೇಷಧಾರಿಯಾಗಿ ಗಾಂಧಿ ಪ್ರತಿಮೆ ಬಳಿ ಕುಳಿತು ಮೌನ ಆಚರಣೆ ಮಾಡಿದ್ದಾರೆ. ಸಮಾಜದಲ್ಲಿ ಹಣಕ್ಕಾಗಿ ಸಣ್ಣ ಪುಟ್ಟ ಕಲಹಗಳಿಂದ ಮನುಷ್ಯನ ನೆಮ್ಮದಿ ಹಾಗೂ ಸಮಾಜದ ನೆಮ್ಮದಿ ಹಾಳಾಗುತ್ತಿದೆ ಎಂದು ಗಾಂಧಿ ವೇಷಧಾರಿ ಮೌನಾಚರಣೆ ಮಾಡಿದ್ದಾರೆ.
ಕೋಲಾರ, ಆ.28: ಜಿಲ್ಲೆಯ ಕೆಜಿಎಫ್ ಪಟ್ಟಣದ ರಾಬರ್ಟ್ ಸನ್ ಪೇಟೆಯಲ್ಲಿ ಗಾಂಧಿ ವೇಷಧಾರಿಯೊಬ್ಬರು ವಿಭಿನ್ನ ರೀತಿಯಲ್ಲಿ ಮೌನಾಚರಣೆ ಮಾಡಿದ್ದಾರೆ. ಕೆಜಿಎಫ್ ತಾಲೂಕು ಕ್ಯಾಸಂಬಳ್ಳಿ ಗ್ರಾಮದ ಶ್ರೀನಿವಾಸರೆಡ್ಡಿ ಎಂಬುವವರು ಶಾಂತಿ ಸೌಹಾರ್ದತೆಗಾಗಿ 12 ಗಂಟೆಗಳ ಕಾಲ ಗಾಂಧಿ ವೇಷಧಾರಿಯಾಗಿ ಗಾಂಧಿ ಪ್ರತಿಮೆ ಬಳಿ ಕುಳಿತು ಮೌನ ಆಚರಣೆ ಮಾಡಿದ್ದಾರೆ. ಸಮಾಜದಲ್ಲಿ ಹಣಕ್ಕಾಗಿ ಸಣ್ಣ ಪುಟ್ಟ ಕಲಹಗಳಿಂದ ಮನುಷ್ಯನ ನೆಮ್ಮದಿ ಹಾಗೂ ಸಮಾಜದ ನೆಮ್ಮದಿ ಹಾಳಾಗುತ್ತಿದೆ ಎಂದು ಗಾಂಧಿ ವೇಷಧಾರಿ ಮೌನಾಚರಣೆ ಮಾಡಿದ್ದಾರೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿಭಿನ್ನ ಪ್ರಯತ್ನ ಮಾಡ್ತಿದ್ದಾರೆ.

