ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ ಮಧ್ಯೆ ಕಲ್ಲು, ದೊಣ್ಣೆಗಳಿಂದ ಬಡಿದಾಟ
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ವಕ್ಫ್ ಬೋರ್ಡ್‌ಗೆ ಸೇರಿದ 11 ಎಕರೆ ಜಮೀನಿಗಾಗಿ ಎರಡು ಕುಟುಂಬಗಳ ಮಧ್ಯೆ ಭೀಕರ ಹೊಡೆದಾಟ ನಡೆದಿದೆ. ಜಮೀನು ತಮ್ಮದೆಂದು ಹೇಳಿಕೊಂಡಿದ್ದು, ಕಲ್ಲು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಲಾಗಿದೆ. ಈದ್ಗಾ ಮತ್ತು ಬಾಡಿಗೆ ಕಟ್ಟಡಗಳಿರುವ ಈ ಆಸ್ತಿ ವಕ್ಫ್ ಬೋರ್ಡ್‌ಗೆ ಸೇರಿದ್ದರೂ, ಕುಟುಂಬಗಳು ಮಾಲಿಕತ್ವಕ್ಕಾಗಿ ಘರ್ಷಣೆಗಿಳಿದಿರುವುದು ಗಂಭೀರ ಪ್ರಕರಣವಾಗಿದೆ.
ಕೋಲಾರ, ಡಿಸೆಂಬರ್ 19: ವಕ್ಫ್ ಬೋರ್ಡ್ ಆಸ್ತಿಗಾಗಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿರುವಂತಹ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ನಡೆದಿದೆ. ಮಾಸ್ತಿ ಗ್ರಾಮದಲ್ಲಿರುವ ವಕ್ಫ್ ಬೋರ್ಡಿಗೆ ಸೇರಿದ 11 ಎಕರೆ ಜಮೀನಿಗಾಗಿ ಗಲಾಟೆ ನಡೆದಿದೆ. ಸಯ್ಯದ್ ರಸೂಲ್ ದರ್ವೇಶ್ ವಂಸಸ್ಥರು ವಕ್ಫ್ ಬೋರ್ಡ್‌ಗೆ ಜಮೀನು ದಾನವಾಗಿ ನೀಡಿದ್ದಾರೆ. ಇದರಲ್ಲಿರುವ ಈದ್ಗಾ, ಬಾಡಿಗೆ ಕಟ್ಟಡ ಎಲ್ಲವೂ ವಕ್ಫ್ ಬೋರ್ಡಿಗೆ ಬರುತ್ತೆ. ಆದರೆ ಈ ಆಸ್ತಿ ನಮ್ಮದು ಎಂದು ಸಯ್ಯದ್ ರಸೂಲ್ ಕುಟುಂಬಸ್ಥರು ಗಲಾಟೆ ಮಾಡಿ ಮಸೀದಿ ಮುಖಂಡರ ಮೇಲೆ ಕಲ್ಲು, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

