ಅಯೋಧ್ಯೆ ಬಾಲರಾಮನ ದರ್ಶನಕ್ಕೆ ಸೈಕಲ್ ಏರಿ ಹೊರಟ ಕೋಲಾರ ಯುವಕರು
ಕೋಲಾರದ ಬಂಗಾರಪೇಟೆ ಪಟ್ಟಣದ ಮೂವರು ಯುವಕರು ಹೊಸ ಸಾಸವೊಂದಕ್ಕೆ ಕೈಹಾಕಿದ್ದಾರೆ. ಕೋಲಾರದಿಂದ ಅಯೋಧ್ಯೆಗೆ ಸೈಕಲ್ ಯಾತ್ರೆ ಕೈಗೊಂಡಿದ್ದು, ಸೈಕಲ್ನಲ್ಲೇ ಸುದೀರ್ಘ ಸಂಚಾರ ನಡೆಸಿ ಅಯೋಧ್ಯೆ ತಲುಪಲಿದ್ದಾರೆ. ನಂತರ ಬಾಲ ರಾಮನ ದರ್ಶನ ಪಡೆಯಲಿದ್ದಾರೆ. ಮಾರ್ಗ ಮಧ್ಯೆ ಹಿಂದೂ ಧರ್ಮ ಜಾಗೃತಿಯನ್ನೂ ಮೂಡಿಸಲಿದ್ದಾರಂತೆ!
ಕೋಲಾರ, ಅಕ್ಟೋಬರ್ 14: ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಯುವಕರಾದ ವರದರಾಜ್, ಗಗನ್, ರವಿ, ಹರೀಶ್ ಸೈಕಲ್‌ನಲ್ಲಿ ಅಯೋಧ್ಯೆಯ ಬಾಲರಾಮನ ದರ್ಶನಕ್ಕೆ ಹೊರಟ್ಟಿದ್ದಾರೆ. ಸುಮಾರು 1900 ಕಿಮೀ ಸೈಕಲ್ ಯಾತ್ರೆ ಮೂಲಕ ದೂರದ ಅಯೋಧ್ಯಾ ಯಾತ್ರೆ ಹೋಗುತ್ತಿರುವ ಯುವಕರು ಇದಕ್ಕೂ ಮೊದಲು ಪಟ್ಟಣದ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭ ಮಾಡಿದ್ದಾರೆ. ಮಾರ್ಗಮಧ್ಯೆ ಹಿಂದೂ ಧರ್ಮ ಜಾಗೃತಿ ಮೂಡಿಸುವುದಾಗಿ ಇವರು ಹೇಳಿಕೊಂಡಿದ್ದಾರೆ. ಯುವಕರ ಸೈಕಲ್ ಯಾತ್ರೆಗೆ ಹಲವಾರು ಸ್ನೇಹಿತರು ಶುಭ ಹಾರೈಸಿ ಬಿಳ್ಕೊಟ್ಟರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ