ಮೈಸೂರು: ಮಹಿಳಾ ಪೊಲೀಸ್ಗೆ ಮಡಿಲು ತುಂಬಿ ಸೀಮಂತ ಮಾಡಿದ ಪೊಲೀಸ್ ಸಿಬ್ಬಂದಿ
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್ಸ್ಟೇಬಲ್ಗೆ ಸೀಮಂತ ಮಾಡಲಾಯಿತು. ಸಿಬ್ಬಂದಿ ಅಕ್ಷತೆ ಹಾಕಿ ಶುಭ ಹಾರೈಸಿದರು. ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ಸೇರಿ ಠಾಣೆಯ ಸಿಬ್ಬಂದಿ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮೈಸೂರು, ಅ.14: ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್ಸ್ಟೇಬಲ್ಗೆ ಸೀಮಂತ ಮಾಡಲಾಯಿತು. ಸಹೋದ್ಯೋಗಿ ಕಾನ್ಸ್ಟೇಬಲ್ ಸುನೀತಾಗೆ ಅರಿಶಿನ, ಕುಂಕುಮ ಹಚ್ಚಿ, ಹಸಿರು ಬಳೆ ತೊಡಿಸಿ ಠಾಣೆಯ ಇತರೆ ಮಹಿಳಾ ಸಿಬ್ಬಂದಿ ಸಂಭ್ರಮಿಸಿದರು. ರೇಷ್ಮೆ ಸೀರೆ, ಅಕ್ಕಿ, ಫಲ ತಾಂಬೂಲ ಸಹಿತ ಉಡಿ ತುಂಬುವ ಶಾಸ್ತ್ರ ಕೂಡ ಮಾಡಲಾಯಿತು. ಸಿಬ್ಬಂದಿ ಅಕ್ಷತೆ ಹಾಕಿ ಶುಭ ಹಾರೈಸಿದರು. ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ಸೇರಿ ಠಾಣೆಯ ಸಿಬ್ಬಂದಿ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos