ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಕೊಲ್ಲಾಪುರದ ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆಯ ವೈದ್ಯರ ವಿಶೇಷ ಶಸ್ತ್ರ ಚಿಕಿತ್ಸೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿ ವೈದ್ಯರು ಮೆದುಳು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ವೈದ್ಯರ ವಿಶೇಷ ಶಸ್ತ್ರ ಚಿಕಿತ್ಸೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೆಳಗಾವಿ, ಸೆಪ್ಟೆಂಬರ್ 21: ಕೊಲ್ಲಾಪುರದ (Kollapur) ಕನ್ಹೇರಿ ಮಠದ (Kanheri Math) ಸಿದ್ಧಗಿರಿ ಆಸ್ಪತ್ರೆಯ ವೈದ್ಯರ ವಿಶೇಷ ಶಸ್ತ್ರ ಚಿಕಿತ್ಸೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿ ವೈದ್ಯರು ಮೆದುಳು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಆಶ್ಚರ್ಯವೆನಿಸಿದರೂ ಸತ್ಯ. ಇಸ್ರೇಲಿನಿಂದ ಬಂದಿದ್ದ ರೈತನಿಗೆ ಮೆದುಳಿನಲ್ಲಿ ಗಡ್ಡೆ ಬೆಳೆದಿತ್ತು. ಅದನ್ನು ಟ್ಯೂಮರ್ ಆಪರೇಷನ್ ಮಾಡಿ ಹೊರ ತೆಗೆಯಬೇಕಿತ್ತು. ಆಗ, ವೈದ್ಯರು ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿ, ಗಡ್ಡೆ ಬೆಳೆದ ಜಾಗದ ಪಕ್ಕದಲ್ಲಿ ಮಾತ್ರ ಅರಿವಳಿಕೆ ನೀಡಿ ಸುಮಾರು 5 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ, ಯಶಸ್ವಿಯಾಗಿದ್ದಾರೆ. ಆಪರೇಷನ್ಗೆ ಕೇವಲ 1.20 ಲಕ್ಷ ರೂ. ವೆಚ್ಚವಾಗಿದೆ.
ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ, ಶಿವಶಂಕರ್ ಮರಜಕ್ಕೆ ಹಾಗೂ ಅರವಳಿಗೆ ತಜ್ಞ ಪ್ರಕಾಶ ಭರಮಗೌಡ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು. ಸಿದ್ಧಗಿರಿ ಆಸ್ಪತ್ರೆ ಅವೇಕ್ ಕ್ರೇನಿಯೊಟಮಿ ಶಸ್ತ್ರಚಿಕಿತ್ಸೆಗೆ ಪ್ರಸಿದ್ಧಿ ಪಡೆದಿದೆ. ಈ ಹಿಂದೆ ರೋಗಿಗೆ ಐಸ್ ಕ್ರೀಮ್ ಕೊಟ್ಟು ವೈದ್ಯರು ಆಪರೇಷನ್ ಮಾಡಿದ್ದರು. ವೈದ್ಯರ ತಂಡ ಈವರೆಗೂ ಒಟ್ಟು 103 ಮೆದುಳು ಶಸ್ತ್ರ ಚಿಕಿತ್ಸೆ ಮಾಡಿದೆ. ರೋಗಿ ಕೊಳಲು ಊದುತ್ತಿರುವ ವಿಡಿಯೋವನ್ನು ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆ ಹಂಚಿಕೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:32 pm, Sat, 21 September 24