ಕೊಪ್ಪಳನಲ್ಲಿ 72 ಕಳೆದು 23ನೇ ಗಣರಾಜ್ಯೋತ್ಸವ ದಿನ ಆಚರಿಸುತ್ತಿದ್ದೇವೆ ಅಂದುಬಿಟ್ಟರು ಸಚಿವ ಆನಂದ್ ಸಿಂಗ್!
ಸಚಿವ ಆನಂದ್ ಸಿಂಗ್ ಅವರು 23 ರ ಎಡವಟ್ಟು ಮಾಡಿದ್ದು ಬುಧವಾರ ಬೆಳಗ್ಗೆ ಕೊಪ್ಪಳನಲ್ಲಿ. ಅವರು ಸದರಿ ಜಿಲ್ಲೆಯ ಉಸ್ತುವಾರಿ ಸಚಿವರೂ ಹೌದು ಮಾರಾಯ್ರೇ. ನಿಮಗೆ ನೆನಪಿರಬಹುದು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆನಂದ್ ಸಿಂಗ್ ತಾನು ಕೇಳುವ ಖಾತೆಯನ್ನೇ ನೀಡಬೇಕು ಅಂತ ಪಟ್ಟು ಹಿಡಿದು ಸರ್ಕಾರವನ್ನು ಆತಂಕದಲ್ಲಿ ದೂಡಿದ್ದರು.
ಬರೆದುಕೊಟ್ಟಿರುವುದನ್ನೂ ಸರಿಯಾಗಿ ಓದಲೊಲ್ಲರು ಪ್ರವಾಸೋದ್ಯಮ ಸಚಿವ ಆನಂದ್ ಪೃಥ್ವಿರಾಜ್ ಸಿಂಗ್! ಆಥವಾ ಭಾಷಣ ಬರೆದಿರುವವನೇ ತಪ್ಪಾಗಿ ಬರೆದನಾ? ಇರಬಹುದು ಮಾರಾಯ್ರೇ. ಆದರೆ ನಾವು ಬರೆದವನಿಗೆ ಸಂಶಯದ ಲಾಭ ಅಂದರೆ ಬೆನಿಫಿಟ್ ಆಫ್ ಡೌಟ್ ನೀಡಲೇಬೇಕು. ಯಾಕೆಂದರೆ ಯಡವಟ್ಟು ಮಾಡುವ ಮೊದಲು ಸಚಿವರು 72 ಕಳೆದು ಅಂತ ಹೇಳುತ್ತಾರೆ. 72 ಕಳೆದ ಮೇಲೆ ಬರೋದು 73 ಅಂತ ಸಚಿವರ ಮೊಮ್ಮಗನಿಗೂ ಗೊತ್ತಿರಬಹುದು. ಹೌದು ತಾನೆ? 72 ಕಳೆದು 23ನೇ ಗಣರಾಜ್ಯೋತ್ಸವ ದಿನವನ್ನು ನಾವಿಂದು ಆಚರಿಸುತ್ತಿದ್ದೇವೆ ಅಂತ ಸಚಿವರು ಹೇಳುತ್ತಾರೆ. 72 ಕಳೆದ ಮೇಲೆ ಯಾವ ಸಂಖ್ಯಾಕ್ರಮದಲ್ಲಿ 23 ಬರುತ್ತೆ ಮಾರಾಯ್ರೇ? ಅವರು ಅದನ್ನು ಬಾಯಿತಪ್ಪಿನಿಂದ ಹೇಳಿದ್ದರೂ ಭಾಷಣ ಮುಂದುವರಿಸುವ ಮುನ್ನ ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಸಿಂಗ್ ಸಾಹೇಬರು ಮಾಡುವುದಿಲ್ಲ.
ಅಂದಹಾಗೆ, ಸಚಿವ ಆನಂದ್ ಸಿಂಗ್ ಅವರು 23 ರ ಎಡವಟ್ಟು ಮಾಡಿದ್ದು ಬುಧವಾರ ಬೆಳಗ್ಗೆ ಕೊಪ್ಪಳನಲ್ಲಿ. ಅವರು ಸದರಿ ಜಿಲ್ಲೆಯ ಉಸ್ತುವಾರಿ ಸಚಿವರೂ ಹೌದು ಮಾರಾಯ್ರೇ. ನಿಮಗೆ ನೆನಪಿರಬಹುದು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆನಂದ್ ಸಿಂಗ್ ತಾನು ಕೇಳುವ ಖಾತೆಯನ್ನೇ ನೀಡಬೇಕು ಅಂತ ಪಟ್ಟು ಹಿಡಿದು ಸರ್ಕಾರವನ್ನು ಆತಂಕದಲ್ಲಿ ದೂಡಿದ್ದರು.
ಪ್ರವಾಸೋದ್ಯಮ ಖಾತೆ ಅವರಿಗೆ ಬೇಡವಾಗಿತ್ತು. ಕೇಳಿದ ಖಾತೆ ಕೊಡದಿದ್ದರೆ ತನಗೆ ಬೇರೆ ಆಪ್ಷನ್ ಗಳಿವೆ ಅಂತ ಬೆದರಿಕೆಯನ್ನೂ ಅವರು ಒಡ್ಡಿದ್ದರು!
ಆಮೇಲೆ, ಬೊಮ್ಮಾಯಿ ಅವರು ಆನಂದ್ ಜೊತೆ ಸಮಾಲೋಚನೆ ನಡೆಸಿ ಏನು ಹೇಳಿದರೋ ಗೊತ್ತಿಲ್ಲ, ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಹೋಗಿರುವ ನಾಯಕರಲ್ಲಿ ಒಬ್ಬರಾಗಿರುವ ಸಚಿವರು, ನನಗೆ ನೀಡಿರುವ ಖಾತೆಯಿಂದ ತೃಪ್ತನಾಗಿದ್ದೇನೆ ಅಂತ ಹೇಳಿದ್ದರು!
ಇದನ್ನೂ ಓದಿ: Mouni Roy: ಸದ್ದಿಲ್ಲದೇ ಆರಂಭವಾಗಿದೆ ಕೆಜಿಎಫ್ ಬೆಡಗಿಯ ವಿವಾಹ ಸಮಾರಂಭ; ಇಲ್ಲಿದೆ ಫೋಟೋ ಹಾಗೂ ವಿಡಿಯೋ