ಚಿಕ್ಕಬಳ್ಳಾಪುರ ಉಸ್ತುವಾರಿ ಎಮ್​ಟಿಬಿ ನಾಗರಾಜ್ ಸಚಿವ ಧ್ವಜ ಹಾರಿಸಲು ಕಷ್ಟಪಟ್ಟರೆ, ಬ್ಯಾಂಡ್​ನವರು ರಾಷ್ಟ್ರಗೀತೆ ನುಡಿಸಲು!

ತಿರಂಗ ಬಿಚ್ಚಿಕೊಳ್ಳುವ ಮೊದಲೇ ರಾಷ್ಟ್ರಗೀತೆ ನುಡಿಸಲು ಕಮಾಂಡ್ ಕೊಟ್ಟಾಗಿತ್ತು. ಹಾಗಾಗಿ ಪೊಲೀಸ್ ಬ್ಯಾಂಡ್​ನವರು ಜನ ಗಣ ಮನ ನುಡಿಸಲಾರಂಭಿಸಿದರು. ರಾಷ್ಟ್ರಗೀತೆ ನುಡಿಸುವುದು ಶುರುವಾದ ಸ್ವಲ್ಪ ಹೊತ್ತಿನ ನಂತರ ತಿರಂಗ ಬಿಟ್ಟಿಕೊಂಡಿತು! ರಾಷ್ಟ್ರಗೀತೆ ಮುಗಿಯುವ ಮೊದಲು ತಿರಂಗ ಬಿಚ್ಚಿಕೊಳ್ಳುತ್ತೋ ಇಲ್ಲವೋ ಎಂಬ ಆತಂಕ ಜನರಲ್ಲಿ ಉಂಟಾಗಿದ್ದು ಮಾತ್ರ ಸತ್ಯ.

TV9kannada Web Team

| Edited By: Arun Belly

Jan 26, 2022 | 6:38 PM

ಸಚಿವರಾದವರಿಗೆ ಧಜಾರೋಹಣ (flag hoisting) ಮಾಡುವ ಅನುಭವವೂ ಇರ್ಸಬೇಕು ಮಾರಾಯ್ರೇ. ಸ್ವಾತಂತ್ರ್ಯೋತ್ಸವ (Independence Day) ಮತ್ತು ಗಣರಾಜ್ಯೋತ್ಸವ ದಿನದಂದು (Republic Day) ಸಚಿವರು ತಮ್ಮ ಉಸ್ತುವಾರಿಯಲ್ಲಿರುವ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡಬೇಕಾಗುತ್ತದೆ. ಧ್ವಜವನ್ನು ಹಗ್ಗದ ಮೂಲಕ ಮೇಲೆಳೆದ ಬಳಿಕ ಅದು ಬಿಚ್ಟಿಕೊಳ್ಳಲು ಕೆಳಗೆ ನಿಂತಿರುವ ಉಸ್ತುವಾರಿ ಸಚಿವರು ಹಗ್ಗವನ್ನು ನಿರ್ದಿಷ್ಟವಾದ ರೀತಿಯಲ್ಲಿ ಎಳೆಯಬೇಕು. ಇಲ್ಲದಿದ್ದರೆ ತಿರಂಗ ಬಿಚ್ಚಿಕೊಳ್ಳುವುದಿಲ್ಲ ಮತ್ತು ಹಗ್ಗದಿಂದ ಧ್ವಜಕ್ಕೆ ಗಂಟು ಬೀಳುವ ಸಾಧ್ಯತೆಯೂ ಇರುತ್ತದೆ. ಎಮ್ ಟಿ ಬಿ ನಾಗರಾಜ (MTB Nagaraj) ಅವರು ಚಿಕ್ಕಬಳ್ಳಾಪುರದ ಉಸ್ತುವಾರಿ ಸಚಿವರು ಅಂತ ನಮಗೆ ಗೊತ್ತಿದೆ. ಬುಧವಾರ ಗಣರಾಜ್ಯೋತ್ಸವ ದಿನದಂದು ಅವರು ಚಿಕ್ಕಬಳ್ಳಾಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ತಿರಂಗವನ್ನು ಹಾರಿಸಿ ಪೊಲೀಸ್ ಸಲ್ಯೂಟ್ ಸ್ವೀಕರಿಸಿದರು. ಆದರೆ ಸಚಿವ ಎಮ್ ಟಿ ಬಿ ಅವರಿಗೆ ಧ್ವಜ ಹಾರಿಸುವುದು ಸ್ವಲ್ಪ ಕಷ್ಟವಾಯಿತು. ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಹಗ್ಗವನ್ನು ಸರಿಯಾದ ರೀತಿಯಲ್ಲಿ ಎಳೆದು ತಿರಂಗ ಬಿಚ್ಚಿಕೊಳ್ಳುವಂತೆ ಮಾಡಿದರು.

ಆದರೆ, ತಿರಂಗ ಬಿಚ್ಚಿಕೊಳ್ಳುವ ಮೊದಲೇ ರಾಷ್ಟ್ರಗೀತೆ ನುಡಿಸಲು ಕಮಾಂಡ್ ಕೊಟ್ಟಾಗಿತ್ತು. ಹಾಗಾಗಿ ಪೊಲೀಸ್ ಬ್ಯಾಂಡ್​ನವರು ಜನ ಗಣ ಮನ ನುಡಿಸಲಾರಂಭಿಸಿದರು. ರಾಷ್ಟ್ರಗೀತೆ ನುಡಿಸುವುದು ಶುರುವಾದ ಸ್ವಲ್ಪ ಹೊತ್ತಿನ ನಂತರ ತಿರಂಗ ಬಿಟ್ಟಿಕೊಂಡಿತು! ರಾಷ್ಟ್ರಗೀತೆ ಮುಗಿಯುವ ಮೊದಲು ತಿರಂಗ ಬಿಚ್ಚಿಕೊಳ್ಳುತ್ತೋ ಇಲ್ಲವೋ ಎಂಬ ಆತಂಕ ಜನರಲ್ಲಿ ಉಂಟಾಗಿದ್ದು ಮಾತ್ರ ಸತ್ಯ.

ಈ ವಿಡಿಯೋದ ಆಡಿಯೋವನ್ನು ನೀವು ಕೇಳಿಸಿಕೊಳ್ಳಿ ಅದರಲ್ಲೂ ವಿಶೇಷವಾಗಿ ರಾಷ್ಟ್ರಗೀತೆ ಹಾಡುವಾಗ. ರಾಷ್ಟ್ರಗೀತೆಯನ್ನ ಬ್ಯಾಂಡ್​ನವರು ಸರಿಯಾದ ರೀತಿಯಲ್ಲೇ ನುಡಿಸಲಾರಂಭಿಸುತ್ತಾರೆ. ಆದರೆ ಚರಣಗಳನ್ನು ನುಡಿಸುವಾಗ ಲಯ ತಪ್ಪುತ್ತದೆ. ನುಡಿಸುವವರ ಧ್ಯಾನವೆಲ್ಲ ಬಿಚ್ಚಿಕೊಳ್ಳದ ಧ್ವಜದ ಮೇಲಿತ್ತೇ ಎಂಬ ಅನುಮಾನ ಕಾಡುತ್ತದೆ.

ರಾಷ್ಟ್ರಗೀತೆಯ ವಿಷಯದಲ್ಲಿ ಇಂಥ ಪ್ರಮಾದಗಳು ಜರುಗಬಾರದು.

ಇದನ್ನೂ ಓದಿ:  ನಾವು ಅಧಿಕಾರಕ್ಕೆ ಬಂದರೆ ಒಬ್ಬರನ್ನೂ ಸುಮ್ಮನೆ ಬಿಡೋದಿಲ್ಲ; ಎಸ್​ಪಿ ಅಭ್ಯರ್ಥಿಯ ವಿಡಿಯೋ ವೈರಲ್

Follow us on

Click on your DTH Provider to Add TV9 Kannada