ತಳ್ಳೊ ಗಾಡಿಲಿ ಓದಿಸಿದ ತಾಯಿ: ಇದರ ಫಲವಾಗಿ 4 ಗೋಲ್ಡ್ ತಂದುಕೊಟ್ಟ ಮಗಳು

Updated By: ರಮೇಶ್ ಬಿ. ಜವಳಗೇರಾ

Updated on: Jun 30, 2025 | 10:21 PM

ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಒಟ್ಟು 352 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 136 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 39 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯ್ತು. ಇನ್ನು ಕೊಪ್ಪಳದ ವಿದ್ಯಾರ್ಥಿನಿ ಅಪರೂಪದ ಸಾಧನೆ ಮಾಡಿದ್ದಾಳೆ.ರಾಯಚೂರಿನ ಬಿಎಸ್‌ಸಿ ಕಾಲೇಜಿನ ವಿದ್ಯಾರ್ಥಿ ಗಾಯತ್ರಿ ಒಟ್ಟು 4 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಅತೀ ಹೆಚ್ಚು ಪದಕ ಪಡೆದ ಪಡೆದ ವಿದ್ಯಾರ್ಥಿನಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಯಚೂರು, (ಜೂನ್ 30): ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ಒಟ್ಟು 352 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 136 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 39 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯ್ತು. ಇನ್ನು ಕೊಪ್ಪಳದ ವಿದ್ಯಾರ್ಥಿನಿ ಅಪರೂಪದ ಸಾಧನೆ ಮಾಡಿದ್ದಾಳೆ.ರಾಯಚೂರಿನ ಬಿಎಸ್‌ಸಿ ಕಾಲೇಜಿನ ವಿದ್ಯಾರ್ಥಿ ಗಾಯತ್ರಿ ಒಟ್ಟು 4 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಅತೀ ಹೆಚ್ಚು ಪದಕ ಪಡೆದ ಪಡೆದ ವಿದ್ಯಾರ್ಥಿನಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಾಯತ್ರಿ ಕೊಪ್ಪಳ ಮೂಲದ ಬಡ ಕುಟುಂಬದ ಯುವತಿ.ತಂದೆ ಸಾವಿನ ಬಳಿಕ ಗಾಯತ್ರಿ ಕುಟುಂಬ ದಿಕ್ಕಿಲ್ಲದೇ ಪರತಪಿಸುತ್ತಿತ್ತು. ಆಗ ಗಾಯತ್ರಿ ಓದಿಗೆ ಬೆನ್ನೇಲುಬಾಗಿ ನಿಂತಿದ್ದು ಆಕೆ ತಾಯಿ ಪ್ರಮಿಳಾ ಕುಮಾರಿ ಗ್ರಾಮದಲ್ಲಿ ಸಣ್ಣ ತಳ್ಳೊ ಬಂಡಿ ರೀತಿಯ ಹೊಟೆಲ್ ನಡೆಸುತ್ತಾ ಮಗಳನ್ನ ಓದಿಸಿ ದೊಡ್ಡ ಸಾಧನೆಗೈಯುವಂತೆ ಮಾಡಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿ ಗಾಯತ್ರಿ ಸಂತಸ ಹಂಚಿಕೊಂಡಿದ್ದಾರೆ.