ದಸರಾವರೆಗಾದರೂ ಅಶೋಕ ಮತ್ತು ವಿಜಯೇಂದ್ರ ತಮ್ಮ ಸ್ಥಾನಗಳಲ್ಲಿ ಮುಂದುವರಿಯುತ್ತಾರೋ? ಪ್ರಿಯಾಂಕ್ ಖರ್ಗೆ
ಸಾಮಾನ್ಯವಾಗಿ ವಿರೋಧ ಪಕ್ಷದ ನಾಯಕ ಅಶೋಕ ಅವರು ದೆಹಲಿಗೆ ಬೆಳಗ್ಗೆ ಹೋದರೆ ಸಾಯಂಕಾಲದ ಹೊತ್ತಿಗೆ ವಾಪಸ್ಸಾಗುತ್ತಾರೆ, ಆದರೆ ಈ ಸಲ ಅವರು ನಾಲ್ಕೈದು ದಿನ ಅಲ್ಲೇ ಠಿಕಾಣಿ ಹೂಡಿದ್ದರು, ಹಾಗಾಗಾಗಿ ಮಾಧ್ಯಮಗಳಲ್ಲಿ ಕುತೂಹಲ ಸೃಷ್ಟಿಯಾಗಿದೆ. ಅಲ್ಲೇನು ನಡೆಯಿತು, ಅವರು ವಿರೋಧ ಪಕ್ಷದ ನಾಯಕನಾಗಿ ಮುಂದುವರಿಯುತ್ತಾರಾ ಅಂತ ಅವರು ಹೇಳಬೇಕು, ತಾನಲ್ಲ ಎಂದು ಖರ್ಗೆ ಹೇಳಿದರು.
ಬೆಂಗಳೂರು, ಜೂನ್ 30: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಕೈಹಿಡಿದು ಮೇಲೆತ್ತಿ ಈ ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ, ಬಂಡೆಯ ಹಾಗೆ ಅಚಲವಾಗಿರುತ್ತದೆ ಅಂತ ಹೇಳಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಲಿಲ್ಲ. ಮಾಧ್ಯಮದವರು ಹೇಳಿರುತ್ತಾರೆ ಹಾಗಾಗಿ ಕೈಯೆತ್ತಿರುತ್ತಾರೆ, ಈ 5 ವರ್ಷ ಅಲ್ಲ, ಮುಂದಿನ ಐದು ವರ್ಷವೂ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರಲಿದೆ ಎಂದು ಖರ್ಗೆ ಹೇಳಿದರು. ಬಿಜೆಪಿ ನಾಯಕರು ಏನೇನೋ ಮಾತಾಡುತ್ತಾರೆ, ದಸರಾಗೆ ಮೊದಲ ಸಿಎಂ ಬದಲಾವಣೆ ಅನ್ನುತ್ತಾರೆ, ಆದರೆ ಅಸಲಿಗೆ ದಸರಾವರೆಗಾದರೂ ಅಶೋಕ ಮತ್ತು ವಿಜಯೇಂದ್ರ ತಮ್ಮ ತಮ್ಮ ಸ್ಥಾನಗಳಲ್ಲಿ ಮುಂದುವರಿಯುತ್ತಾರೋ ಇಲ್ಲವೋ ನಾಕಾಣೆ ಎಂದು ಖರ್ಗೆ ನಗುತ್ತಾ ಹೇಳಿದರು.
ಇದನ್ನೂ ಓದಿ: ಅಮೇರಿಕ ತೆರಳಲು ಕೇಂದ್ರ ನಿರ್ಬಂಧ ವಿಧಿಸಿದ್ದರಿಂದ ರಾಜ್ಯಕ್ಕೆ ಕನಿಷ್ಠ ₹ 15,000 ಕೋಟಿ ನಷ್ಟವಾಗಿದೆ: ಪ್ರಿಯಾಂಕ್ ಖರ್ಗೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ