ಬೈಕ್ ಮೂಲಕ ಎಡೆಕುಂಟೆ ಹೊಡೆದ ಕೊಪ್ಪಳದ ​ರೈತ, ಜೀವನಾಡಿಯಾದ ದ್ವಿಚಕ್ರ ವಾಹನ

| Updated By: ವಿವೇಕ ಬಿರಾದಾರ

Updated on: May 31, 2024 | 11:08 AM

ರೈತರಿಗೆ ಎತ್ತುಗಳು ರೈತನ ಜೀವನಾಡಿ, ಆದರೆ ಈ ರೈತರಿಗೆ ಬೈಕ್​ ಜೀವನಾಡಿಯಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊರಡಕೇರಾ ಗ್ರಾಮದ ಯಮನೂರಪ್ಪ ಹಡಪದ ಎಂಬ ರೈತ ಬೈಕ್​ ಮೂಲಕ ಎಡೆಕುಂಟೆ ಹೊಡೆದಿದ್ದಾರೆ.

ಕೊಪ್ಪಳ, ಮೇ 31: “ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ” ಎಂಬ ಮಾತಿನಂತೆ ಎತ್ತುಗಳು ಇಲ್ಲದ ಹಿನ್ನೆಲೆಯಲ್ಲಿ ರೈತ ಬೈಕ್ (Bike)​ ಮೂಲಕ ಎಡೆಕುಂಟೆ ಹೊಡೆದಿದ್ದಾನೆ. ರೈತರಿಗೆ ಎತ್ತುಗಳು ರೈತನ ಜೀವನಾಡಿ, ಆದರೆ ಈ ರೈತರಿಗೆ ಬೈಕ್​ ಜೀವನಾಡಿಯಾಗಿದೆ. ಕೊಪ್ಪಳ (Koppal) ಜಿಲ್ಲೆಯ ಕುಷ್ಟಗಿ (Kustagi) ತಾಲೂಕಿನ ಕೊರಡಕೇರಾ ಗ್ರಾಮದ ಯಮನೂರಪ್ಪ ಹಡಪದ ಎಂಬ ರೈತ ಬೈಕ್​ ಮೂಲಕ ಎಡೆಕುಂಟೆ ಹೊಡೆದಿದ್ದಾರೆ. ಎಡೆಕುಂಟೆಯನ್ನು ಎಕ್ಸ್​ಎಲ್ ಸೂಪರ್ ಬೈಕ್​ಗೆ ಕಟ್ಟಿ, ಮಗ ಮಹಾಂತೇಶ ಅವರೊಂದಿಗೆ ತಂದೆ ಯಮನೂರಪ್ಪ ಎಡೆಕುಂಟೆ ಹೊಡೆದಿದ್ದಾರೆ.

ಎರಡು ಎಕರೆ ಭೂಮಿಯಲ್ಲಿ 350 ರೂಪಾಯಿ ಪೆಟ್ರೋಲ್ ಖರ್ಚು ಮಾಡಿ ರೈತ ಯಮನೂರಪ್ಪ ಎಡೆಕುಂಟೆ ಹೊಡೆದರು. ಇಷ್ಟೆ ಭೂಮಿಗೆ ಎತ್ತುಗಳ ಮೂಲಕ ಎಡೆಕುಂಟೆ ಹೊಡೆಯಲು 2000 ರೂ. ನೀಡಬೇಕಾಗುತ್ತಿತ್ತು. ಅಲ್ಲದೆ ದುಡ್ಡು ಕೊಡುತ್ತೇವೆ ಅಂದರು ಎತ್ತುಗಳು ಸಿಗುತ್ತಿಲ್ಲ. ಹೀಗಾಗಿ ಬೈಕ್​ನಲ್ಲಿ ಆದರೆ ಕಡಿಮೆ ದರದಲ್ಲಿ ಎಡಕುಂಟೆ ಹೊಡೆದೆವು ಎಂದು ರೈತ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on