ಕೊಪ್ಪಳ: ಅಪಾಯಕಾರಿಮಟ್ಟದಲ್ಲಿ ನೀರು ಹರಿಯುತ್ತಿದ್ದ ಸೇತುವೆ ಮೇಲೆ ಸೆಲ್ಫೀ ತೆಗೆದುಕೊಳ್ಳಲೆತ್ನಿಸಿದ ಯುವಕನಿಗೆ ಅಧಿಕಾರಿಯಿಂದ ಕಪಾಳಮೋಕ್ಷ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 14, 2022 | 11:05 AM

ಸೇತುವೆ ಕೆಳಗೆ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದರೂ ಯುವಕರು ಸೆಲ್ಫೀ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದುದನ್ನು ಗಮನಿಸಿದ ಅಧಿಕಾರಿ ಅಲ್ಲಿಗೆ ಧಾವಿಸಿ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿ ಅಲ್ಲಿಂದ ಓಡಿಸಿದ್ದಾರೆ.

ಕೊಪ್ಪಳ: ಕತ್ತೆಗೆ ಲತ್ತೆ ಪೆಟ್ಟು ಅನ್ನೋ ಗಾದೆಮಾತಿದೆ ಕನ್ನಡದಲ್ಲಿ. ಕೊಪ್ಪಳದ ಮುನಿರಾಬಾದ್ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಇಂಜಿನೀಯರ್ (executive engineer) ಆಗಿ ಕೆಲಸ ಮಾಡುವ ಶಿವಶಂಕರ್ (Shivashankar) ಅವರು ಭರ್ತಿಯಾಗಿರುವ ಮುನಿರಾಬಾದ್ ಜಲಾಶಯಕ್ಕೆ (Munirabad Dam) ಹತ್ತಿರವಿರುವ ಕಿರು ಸೇತುವೆ ಮೇಲೆ ಸೆಲ್ಫೀಗಾಗಿ ಹುಚ್ಚಾಟ ನಡೆಸುತ್ತಿದ್ದ ಯುವಕರಿಗೆ ಮಾಡಿದ್ದು ಅದೇ. ಸೇತುವೆ ಕೆಳಗೆ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದರೂ ಯುವಕರು ಸೆಲ್ಫೀ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದುದನ್ನು ಗಮನಿಸಿದ ಅಧಿಕಾರಿ ಅಲ್ಲಿಗೆ ಧಾವಿಸಿ ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿ ಅಲ್ಲಿಂದ ಓಡಿಸಿದ್ದಾರೆ.

ಇದನ್ನೂ ಓದಿ:  Jog Falls: ಇದು ನಯಾಗರ ಫಾಲ್ಸ್​ ಅಂದ್ಕೊಂಡ್ರಾ?; ಜೋಗ ಜಲಪಾತದ ರುದ್ರ ರಮಣೀಯ ವಿಡಿಯೋ ವೈರಲ್

Follow us on