ಈ ಬಾರಿಯ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ದೇವನೂರು ಮಹಾದೇವ ಅವರಿಗೆ ನೀಡಬೇಕು: ಪ್ರತಾಪ್ ಸಿಂಹ
ಪುಸ್ತಕದಲ್ಲಿ ಅಂಬಾನಿ ಮತ್ತು ಅದಾನಿ ಬಗ್ಗೆ ತಪ್ಪು ಮಾಹಿತಿ ನೀಡಿರುವ ಮಹಾದೇವ ಅವರು ಅರ್ಥಶಾಸ್ತ್ರಜ್ಞ ಅನಿಸಿಕೊಳ್ಳುವ ಹಟ ಬಿಟ್ಟು ಸಾಹಿತಿಯಾಗಿರೋದೇ ವಾಸಿ ಎಂದು ಸಂಸದರು ಹೇಳಿದರು.
ಮೈಸೂರು: ದೇವನೂರು ಮಹಾದೇವ (Devanur Mahadeva) ಅವರು ಬರೆದಿರುವ ಆರೆಸ್ಸೆಸ್ ಆಳ ಮತ್ತು ಅಗಲ ಪುಸ್ತಕದ ಬಗ್ಗೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಅವರ ಅಭಿಪ್ರಾಯ ಕೇಳಿದಾಗ, ಇದು ಕೃತಿ ಅಲ್ಲ ವಿಕೃತಿ ಎಂದರು. ಪುಸ್ತಕದಲ್ಲಿ ಅವರು ಒಬ್ಬ ಆರ್ಥಿಕ ತಜ್ಞರ (economist) ಹಾಗೆ ವಿವರಣೆ ನೀಡಿರುವುದನ್ನು ನೋಡಿದರೆ, ಈ ಬಾರಿಯ ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರವನ್ನು ಅವರಿಗೆ ನೀಡಬೇಕು ಎಂದು ಪ್ರತಾಪ್ ಸಿಂಹ ಹೇಳಿದರು. ಪುಸ್ತಕದಲ್ಲಿ ಅಂಬಾನಿ ಮತ್ತು ಅದಾನಿ ಬಗ್ಗೆ ತಪ್ಪು ಮಾಹಿತಿ ನೀಡಿರುವ ಮಹಾದೇವ ಅವರು ಅರ್ಥಶಾಸ್ತ್ರಜ್ಞ ಅನಿಸಿಕೊಳ್ಳುವ ಹಟ ಬಿಟ್ಟು ಸಾಹಿತಿಯಾಗಿರೋದೇ ವಾಸಿ ಎಂದು ಸಂಸದರು ಹೇಳಿದರು.
ಇದನ್ನೂ ಓದಿ: ‘ಎಂಥಾ ಮೂರ್ಖ ಪ್ರಶ್ನೆ ಇದು’; ಆನ್ಲೈನ್ ಸಂದರ್ಶನದಲ್ಲಿ ವಿಡಿಯೋ ಆನ್ ಆಗಿದ್ದು ತಿಳಿಯದೇ ಯುವತಿ ಬೈದ ದೃಶ್ಯ ಇದೀಗ ವೈರಲ್
Latest Videos