ಬಸ್ ಮೇಲಿನ ಪುನೀತ್ ಭಾವಚಿತ್ರಕ್ಕೆ ಮುತ್ತು ಕೊಟ್ಟಿದ್ದ ಅಜ್ಜಿ ಹೇಳಿದ್ದೇನು?
ಬಸ್ ಮೇಲೆ ಅಂಟಿಸಿದ್ದ ಜಾಹೀರಾತಿನಲ್ಲಿ ಇರುವ ಪುನೀತ್ ಫೋಟೋಗೆ ವೃದ್ಧೆಯೊಬ್ಬರು ಮುತ್ತಿಟ್ಟು ಕಂಬನಿ ಸುರಿಸಿದ್ದಾರೆ. ಈ ಬಗ್ಗೆ ಅಜ್ಜಿ ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಪುನೀತ್ ಹೃದಯಾಘಾತದಿಂದ ಮೃತಪಟ್ಟ ಘಟನೆಯಿಂದ ಕೋಟ್ಯಂತರ ಜನರಿಗೆ ನೋವಾಗಿದೆ. ಅಪ್ಪು ಅಗಲಿಕೆಯಿಂದ ಅನೇಕ ಹಿರಿಯ ಜೀವಗಳು ಮರುಗುತ್ತಿವೆ. ಅಪ್ಪು ಫೋಟೋ ಮುಂದೆ ಅಜ್ಜಿಯರು ಕಣ್ಣೀರು ಹಾಕುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ಬಸ್ ನಿಲ್ದಾಣದಲ್ಲಿ ಇದೇ ರೀತಿಯ ಒಂದು ಘಟನೆ ನಡೆದಿದೆ. ಬಸ್ ಮೇಲೆ ಅಂಟಿಸಿದ್ದ ಜಾಹೀರಾತಿನಲ್ಲಿ ಇರುವ ಪುನೀತ್ ಫೋಟೋಗೆ ವೃದ್ಧೆಯೊಬ್ಬರು ಮುತ್ತಿಟ್ಟು ಕಂಬನಿ ಸುರಿಸಿದ್ದಾರೆ. ಈ ಬಗ್ಗೆ ಅಜ್ಜಿ ಸ್ವತಃ ಮಾಹಿತಿ ಹಂಚಿಕೊಂಡಿದ್ದಾರೆ.
‘ಪುನೀತ್ ನಿಧನ ಹೊಂದಬಾರದಿತ್ತು. ಅವರೆಂದರೆ ನಂಗೆ ಬಹಳ ಪ್ರೀತಿ’ ಎಂದು ಅಜ್ಜಿ ಮಾಹಿತಿ ನೀಡಿದರು. ಅವರು ಹೇಳಿಕೊಂಡಿದ್ದೇನು? ಅಜ್ಜಿಯ ಊರು ಯಾವುದು ಎಂಬಿತ್ಯಾದಿ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಪುನೀತ್ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ಅಜ್ಜಿ; ವಿಡಿಯೋ ವೈರಲ್
Loading...
Unable to load recommendations.
Follow Us
