ಕೊಪ್ಪಳ: 5 ದಿನಗಳಿಂದ ಮರದ ಮೇಲೆ ಕುಳಿತು ಸ್ವಾಮೀಜಿ ವ್ರತ! 101 ದಿನ ಮರದಲ್ಲೇ ಇರಲಿರುವ ಸಚ್ಚಿದಾನಂದ ಶ್ರೀ

Edited By:

Updated on: Jul 29, 2025 | 11:38 AM

2012 ರಲ್ಲಿ ಆಲದಮರದಲ್ಲಿ ಕುಳಿತು ಧ್ಯಾನ ಮಾಡುವ ಮೂಲಕ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಅವಧೂತ ಸ್ವಾಮೀಜಿ ಸಚ್ಚಿದಾನಂದ ಶ್ರೀ ಇದೀಗ ಮತ್ತೆ ಕೊಪ್ಪಳದಲ್ಲಿ ಐದು ದಿನಗಳಿಂದ ಮರದ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದು, ಗಮನ ಸೆಳೆದಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಈ ಅನುಷ್ಠಾನ ಮಾಡುತ್ತಿದ್ದಾರೆ ಎನ್ನಲಾಗಿದ್ದು, ವಿಡಿಯೋ ಇಲ್ಲಿದೆ.

ಕೊಪ್ಪಳ, ಜುಲೈ 29: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬಾದ್ಯಪುರದಿಂದ ಬಂದಿರುವ ಅವಧೂತ ಸ್ವಾಮೀಜಿ ಸಚ್ಚಿದಾನಂದ ಶ್ರೀ, ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಷ್ಟೂರು ಬಳಿ ಬರಗಾಲ ಸಿದ್ದಪ್ಪ ಮಠದ ಆವರಣದಲ್ಲಿ ಮರದ ಮೇಲೆಯೇ ಕುಳಿತು ಅನುಷ್ಠಾನ ಮಾಡುತ್ತಾ ಗಮನ ಸೆಳೆದಿದ್ದಾರೆ. ಕಳೆದ ಐದು ದಿನಗಳಿಂದ ಮಾವಿನ ಮರದ ತೋಪಿನಲ್ಲೇ ಇರುವ ಸ್ವಾಮೀಜಿ, ಲೋಕ ಕಲ್ಯಾಣಕ್ಕಾಗಿ ವ್ರತ ಮಾಡುತ್ತಿದ್ದಾರೆ. ಅವರ ಕಠಿಣ ಅನುಷ್ಠಾನ ಕಂಡು ಜನರು ಅಚ್ಚರಿಗೊಂಡಿದ್ದಾರೆ.

ಅನ್ನ, ಆಹಾರ ತ್ಯಜಿಸಿ ವ್ರತ ಮಾಡುತ್ತಿರುವ ಶ್ರೀಗಳು, ದಿನಕ್ಕೆ ಒಂದು ಬಾರಿ ಒಂದು ಲೋಟ ಹಾಲು ಸೇವನೆ ಮಾಡುತ್ತಾರೆ. ಒಟ್ಟು 101 ದಿನಗಳು ಅವರು ಮರದಲ್ಲಿಯೇ ಕುಳಿತು ಧ್ಯಾನ ಮಾಡಲಿದ್ದಾರೆ. ಮಾವಿನ ತೋಟದಲ್ಲಿರುವ ಮಾವಿನ ಮರವೊಂದರಲ್ಲಿ ಜೊಪಡಿ ನಿರ್ಮಾಣ ಮಾಡಿಕೊಂಡು ಅದರಲ್ಲೇ ಮೌನವಾಗಿ ಧ್ಯಾನ ಮಾಡುತ್ತಿದ್ದಾರೆ. ಸಚ್ಚಿದಾನಂದ ಶ್ರೀ 2012 ರಲ್ಲಿ ಆಲದಮರದಲ್ಲಿ ಕುಳಿತು ಅನುಷ್ಠಾನ ಮಾಡಿ ದೇಶದಾದ್ಯಂತ ಸುದ್ದಿಯಾಗಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ