ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ವ್ಹೀಲ್​ಚೇರ್ ಇಲ್ಲದ್ದಕ್ಕೆ ರೋಗಿಯನ್ನ 3ನೇ ಮಹಡಿಯಿಂದ ಹೊತ್ತು ಸಾಗಿದ ಯುವಕ: ವಿಡಿಯೋ ನೋಡಿ

Updated By: ಗಂಗಾಧರ​ ಬ. ಸಾಬೋಜಿ

Updated on: Nov 21, 2025 | 10:33 PM

ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ವ್ಹೀಲ್ ಚೇರ್ ಕೊರತೆ ಮತ್ತು ವೈದ್ಯರ ನಿರ್ಲಕ್ಷ್ಯದಿಂದಾಗಿ, ಪೀಡ್ಸ್ ನಿಂದ ನರಳುತ್ತಿದ್ದ ರೋಗಿಯನ್ನು ಕುಟುಂಬ ಸದಸ್ಯರು ಮೂರನೇ ಮಹಡಿಯಿಂದ ತುರ್ತು ಚಿಕಿತ್ಸಾ ವಿಭಾಗಕ್ಕೆ ಹೊತ್ತುಕೊಂಡು ಬರುವಂತಾಯಿತು. ಕಳೆದ ಮೂರು ದಿನಗಳಿಂದ ದಾಖಲಾಗಿದ್ದ ರೋಗಿಗೆ ವೈದ್ಯಕೀಯ ನೆರವು ಸಿಗದೇ ಸಂಬಂಧಿಕರು ಪರದಾಡಿದ್ದಾರೆ.

ಕೊಪ್ಪಳ, ನವೆಂಬರ್​ 21: ವ್ಹೀಲ್ ಚೇರ್​ ಇಲ್ಲದ ಕಾರಣ ಮೂರನೇ ಮಹಡಿಯಿಂದ ರೋಗಿಯನ್ನು ಸಂಬಂಧಿಕರು ಹೊತ್ತುಕೊಂಡ ಬಂದಿರುವಂತಹ ಅಮಾನವೀಯ ಘಟನೆಯೊಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಪೀಡ್ಸ್ ಬಂದು ರೋಗಿ ನರಳಾಡಿದ್ದಾರೆ. ಮೂರನೇ ಮಹಡಿಗೆ ವೈದ್ಯರು ಬಾರದ ಹಿನ್ನಲೆ ರೋಗಿಯನ್ನು ಎಮರ್ಜೆನ್ಸಿ ವಾರ್ಡ್​ಗೆ ಸಂಬಂಧಿಕರು ಎತ್ತಿಕೊಂಡು ಬಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.