101 ಕೆಜಿ ಜೋಳದ ಮೂಟೆ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಯುವಕ: ವಿಡಿಯೋ ನೋಡಿ

Edited By:

Updated on: Nov 04, 2025 | 9:35 AM

ಬಾಗಲಕೋಟೆ ಜಿಲ್ಲೆಯ ಬಿಸಲದಿನ್ನಿ ಗ್ರಾಮದ 19 ವರ್ಷದ ನವೀನ್ ಬರಮಗೌಡರ್, ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವನ್ನು 101 ಕೆಜಿ ಜೋಳದ ಚೀಲ ಹೊತ್ತು ಒಂದೂವರೆ ಗಂಟೆಯಲ್ಲಿ ಏರಿದ್ದಾರೆ. 575 ಮೆಟ್ಟಿಲುಗಳನ್ನು ಹತ್ತಿ ತಮ್ಮ ಅಚಲ ಭಕ್ತಿಯನ್ನು ಪ್ರದರ್ಶಿಸಿದ್ದಾರೆ. ಈ ವಿಶಿಷ್ಟ ಸಾಧನೆಗಾಗಿ ದೇವಸ್ಥಾನದ ಆಡಳಿತ ಮಂಡಳಿ ನವೀನ್‌ರನ್ನು ಸನ್ಮಾನಿಸಿದೆ.

ಕೊಪ್ಪಳ, ನವೆಂಬರ್ 4: ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟವನ್ನು ಬಾಗಲಕೋಟೆ ಜಿಲ್ಲೆಯ ಬಿಸಲದಿನ್ನಿ ಗ್ರಾಮದ 19 ವರ್ಷದ ನವೀನ್ ಬರಮಗೌಡರ್ 101 ಕೆಜಿ ತೂಕದ ಜೋಳದ ಚೀಲ ಹೊತ್ತು ಏರುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ. ನವೀನ್ ಕೇವಲ ಒಂದೂವರೆ ಗಂಟೆಯ ಅವಧಿಯಲ್ಲಿ ಬೆಟ್ಟ ಏರಿದ್ದಾರೆ. ಅಂಜನಾದ್ರಿ ಬೆಟ್ಟದ 575 ಮೆಟ್ಟಿಲುಗಳನ್ನು 101 ಕೆಜಿ ಭಾರದೊಂದಿಗೆ ಹತ್ತುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯ ಮತ್ತು ಅಪಾರ ಶ್ರದ್ಧೆಯನ್ನು ನವೀನ್ ಪ್ರದರ್ಶಿಸಿದ್ದಾರೆ. ಯುವಕನ ಈ ಶ್ರಮವನ್ನು ಗುರುತಿಸಿ, ಅಂಜನಾದ್ರಿ ದೇವಸ್ಥಾನದ ಆಡಳಿತ ಮಂಡಳಿಯು ಅವರನ್ನು ಸನ್ಮಾನಿಸಿ ಗೌರವಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ