Video: ಕದಿಯಲು ಬಂದು ಅಡುಗೆಮನೆಯ ಎಕ್ಸಾಸ್ಟ್ನಲ್ಲಿ ಸಿಲುಕಿದ ಕಳ್ಳ, ಅರ್ಧ ದೇಹ ಒಳಗೆ, ಅರ್ಧ ಹೊರಗೆ
ಕಳ್ಳರು ಎಲ್ಲವನ್ನು ದರೋಡೆ ಮಾಡಿ ಹೋದ ಬಳಿಕ ಸಿಕ್ಕಿಬಿದ್ದ ನಿದರ್ಶನಗಳಿವೆ, ಆದರೆ ಮನೆಯಲ್ಲಿ ಯಾರೂ ಇಲ್ಲದಿದ್ದರೂ ಕಳ್ಳ ಮನೆಯೊಳಗೆ ಸಿಕ್ಕಿಬಿದ್ದಿದ್ಹೇಗೆ ಎನ್ನುವ ಇಂಟರೆಸ್ಟಿಂಗ್ ಸುದ್ದಿ ಇಲ್ಲಿದೆ. ಈ ಘಟನೆ ರಾಜಸ್ಥಾನದ ಕೋಟಾದಲ್ಲಿ ಜನವರಿ 5 ರಂದು ನಡೆದಿದೆ. ಮನೆಮಂದಿಯಲ್ಲಾ ತೀರ್ಥಯಾತ್ರೆಗೆ ಹೋಗಿದ್ದರು. ಕಳ್ಳನೊಬ್ಬ ಅಡುಗೆ ಮನೆಯ ಎಕ್ಸಾಸ್ಟ್ ಒಡೆದು ಅದರಿಂದ ಮನೆಯೊಳಗೆ ಪ್ರವೇಶಿಸಲು ಹೋಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಕೋಟಾ, ಜನವರಿ 06: ಕಳ್ಳರು ಎಲ್ಲವನ್ನು ದರೋಡೆ ಮಾಡಿ ಓಡಿ ಹೋದ ಬಳಿಕ ಸಿಕ್ಕಿಬಿದ್ದಿರುವ ನಿದರ್ಶನಗಳಿವೆ, ಆದರೆ ಮನೆಯಲ್ಲಿ ಯಾರೂ ಇಲ್ಲದಿದ್ದರೂ ಕಳ್ಳ ಮನೆಯೊಳಗೆ ಸಿಕ್ಕಿಬಿದ್ದಿದ್ಹೇಗೆ ಎನ್ನುವ ಇಂಟರೆಸ್ಟಿಂಗ್ ಸುದ್ದಿ ಇಲ್ಲಿದೆ. ಈ ಘಟನೆ ರಾಜಸ್ಥಾನದ ಕೋಟಾದಲ್ಲಿ ಜನವರಿ 5 ರಂದು ನಡೆದಿದೆ. ಮನೆಮಂದಿಯಲ್ಲಾ ತೀರ್ಥಯಾತ್ರೆಗೆ ಹೋಗಿದ್ದರು. ಕಳ್ಳನೊಬ್ಬ ಅಡುಗೆ ಮನೆಯ ಎಕ್ಸಾಸ್ಟ್ ಒಡೆದು ಅದರಿಂದ ಮನೆಯೊಳಗೆ ಪ್ರವೇಶಿಸಲು ಹೋಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಆ ದರೋಡೆಕೋರ ಆ ಎಕ್ಸಾಸ್ಟ್ ದ್ವಾರದಲ್ಲಿ ಸಿಲುಕಿ ನರಳಿದ್ದಾನೆ. ಮಾಲೀಕ ಬರುವವರೆಗೂ ಆತ ಅದರಲ್ಲೇ ಸಿಲುಕಿದ್ದು, ದೃಶ್ಯ ಬೆಚ್ಚಿಬಿಳಿಸುವಂತಿದೆ. ಅವನ ಅರ್ಧ ದೇಹವು ಹೊರಗಿದ್ದ ಇನ್ನರ್ಧ ದೇಹ ಒಳಗಿತ್ತು. ಬಳಿಕ ತಪ್ಪಾಯಿತೆಂದು ಮನೆ ಮಾಲೀಕನ ಬಳಿ ಬೇಡಿಕೊಂಡಿದ್ದಾನೆ. ಕೋಟಾದ ಪ್ರತಾಪ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮನೆ ಮಾಲೀಕ ಸುಭಾಷ್ ಕುಮಾರ್ ರಾವತ್ ಎಂದು ಗುರುತಿಸಲಾಗಿದ್ದು, ಜನವರಿ 3 ರಂದು ತಾನು ಮತ್ತು ತನ್ನ ಪತ್ನಿ ಖತು ಶ್ಯಾಮ್‌ಜಿಯಲ್ಲಿ ದರ್ಶನಕ್ಕೆ ಹೋಗಿದ್ದೆವು ಮತ್ತು ಜನವರಿ 5 ರ ರಾತ್ರಿ ಮನೆಗೆ ಮರಳಿದ್ದೆವು ಎಂದು ಮಾಹಿತಿ ನೀಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

