ಸಿಎಂ ಆಗಿ ದೇವರಾಜ ಅರಸು ದಾಖಲೆ ಮುರಿದ ಸಿದ್ದರಾಮಯ್ಯ! ಅಭಿಮಾನಿಗಳಿಂದ 6000 ಜನರಿಗೆ ನಾಟಿಕೋಳಿ ಬಾಡೂಟ
ಕರ್ನಾಟಕದ ಮಾಜಿ ಸಿಎಂ ದೇವರಾಜ ಅರಸು 7 ವರ್ಷ 7 ತಿಂಗಳು 20 ದಿನಗಳ ಕಾಲ ಕಾರ್ಯನಿರ್ವಹಿಸಿದ್ದರು. ಮೊದಲ ಅವಧಿಯಲ್ಲಿ 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೆ 5 ವರ್ಷ 9 ತಿಂಗಳು 11 ದಿನ ಸಿಎಂ ಆಗಿ ಸೇವೆ ಸಲ್ಲಿಸಿದರು. ನಂತರ 1978ರ ಫೆಬ್ರುವರಿ 28ರಿಂದ 1980ರ ಜುಲೈ 7ರವರೆಗೆ 2ನೇ ಅವಧಿಯಲ್ಲಿ ಸಿಎಂ ಆಗಿ ಕಾರ್ಯ ನಿರ್ವಹಿಸಿದರು. ಈ ದಾಖಲೆ ಈಗ ಸಿದ್ದರಾಮಯ್ಯ ಮುರಿದಿದ್ದಾರೆ.
ನೆಲಮಂಗಲ, ಜನವರಿ 06: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಕರ್ನಾಟಕದ ಮಾಜಿ ಸಿಎಂ ದೇವರಾಜ ಅರಸು 7 ವರ್ಷ 7 ತಿಂಗಳು 20 ದಿನಗಳ ಕಾಲ ಕಾರ್ಯನಿರ್ವಹಿಸಿದ್ದರು. ಮೊದಲ ಅವಧಿಯಲ್ಲಿ 1972ರ ಮಾರ್ಚ್ 20ರಿಂದ 1977ರ ಡಿಸೆಂಬರ್ 31ರವರೆಗೆ 5 ವರ್ಷ 9 ತಿಂಗಳು 11 ದಿನ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ನಂತರ 1978ರ ಫೆಬ್ರುವರಿ 28ರಿಂದ 1980ರ ಜುಲೈ 7ರವರೆಗೆ 2ನೇ ಅವಧಿಯಲ್ಲಿ ಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು.
2013ರಲ್ಲಿ ಮೊದಲ ಅವಧಿಯಲ್ಲಿ ಮೇ 13ರಿಂದ 2018ರ ಮೇ 17ರವರೆಗೆ ಸಿಎಂ ಆಗಿದ್ದ ಸಿದ್ದರಾಮಯ್ಯ, 2023ರ ಮೇ 20ರಿಂದ 2ನೇ ಅವಧಿಯಲ್ಲಿ ಅಧಿಕಾರದಲ್ಲಿದ್ದು, ಒಟ್ಟು 7 ವರ್ಷ 7 ತಿಂಗಳು 20 ದಿನಗಳ ಸೇವೆ ಪೂರೈಸಿ ದೇವರಾಜ ಅರಸು ದಾಖಲೆಯನ್ನು ಮುರಿದಿದ್ದಾರೆ. ಇದೇ ಸಂಭ್ರಮದಲ್ಲಿ ನೆಲಮಂಗಲದ ಭಕ್ತನಪಾಳ್ಯದಲ್ಲಿ ಅಹಿಂದ ಯುವ ಸಂಘಟನೆ ವತಿಯಿಂದ ನಾಟಿಕೋಳಿ ಬಾಡೂಟ ಆಯೋಜಿಸಲಾಗಿದೆ. 2000 ಕೆಜಿ ನಾಟಿಕೋಳಿ ಬಳಸಿ 6,000ಕ್ಕೂ ಹೆಚ್ಚು ಜನರಿಗೆ ಮುದ್ದೆ, ಸಾರು, ಅನ್ನ, ರಸಂ ಭೋಜನ ಸಿದ್ಧಪಡಿಸಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

