ರಾಯಚೂರಿನಲ್ಲಿ ರಸ್ತೆಗಿಳಿದ ‘ವಿದ್ಯಾರ್ಥಿ ರಥ’; ಸ್ಕೂಲ್ ಮಕ್ಕಳೀಗಾಗಿಯೇ ರಿಸರ್ವ್ 15 ಹೊಸ ಬಸ್ಗಳು
ಕರ್ನಾಟಕದ ಸಿಂಧನೂರು ತಾಲೂಕಿನಲ್ಲಿ ವಿದ್ಯಾರ್ಥಿಗಳ ಸಾರಿಗೆ ಸಮಸ್ಯೆಗೆ 'ವಿದ್ಯಾರ್ಥಿ ರಥ' ಯೋಜನೆ ಪರಿಹಾರ ಒದಗಿಸಿದೆ. 5 ಕೋಟಿ ರೂ. ವೆಚ್ಚದಲ್ಲಿ 15 ಹೊಸ ಬಸ್‌ಗಳನ್ನು ಪಿಯು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ಈ ವಿಶೇಷ ಸೇವೆಯಿಂದ 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದವರಿಗೆ ಸುರಕ್ಷಿತ ಮತ್ತು ಸಮಯೋಚಿತ ಪ್ರಯಾಣ ಸಾಧ್ಯವಾಗಲಿದ್ದು, ಇದು ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಹೆಜ್ಜೆಯಾಗಿದೆ.

ರಾಯಚೂರು, ಜನವರಿ 06: ಕರ್ನಾಟಕದ ಹಲವೆಡೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದಾರೆ. ರಾಯಚೂರಿನಲ್ಲಿಯೂ ಮಕ್ಕಳು ಇದೇ ಸಮಸ್ಯೆ ಎದುರಿಸುತ್ತಿದ್ದು, ಇದಕ್ಕೆ ಪರಿಹಾರವಾಗಿ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆಂದೇ ಬಸ್ ಸೇವೆ ಆರಂಭವಾಗಿದ್ದು, ಸಿಂಧನೂರು ತಾಲ್ಲೂಕಿನಲ್ಲಿ 15 ಹೊಸ ಬಸ್‌ಗಳನ್ನು ವಿದ್ಯಾರ್ಥಿಗಳಿಗಾಗಿ ರಿಸರ್ವ್ ಮಾಡಲಾಗಿದೆ. ‘ವಿದ್ಯಾರ್ಥಿ ರಥ’ ಹೆಸರಿನ ಯೋಜನೆಯಡಿ ಸೇವೆ ನೀಡಲು ಸಿದ್ಧತೆ ಸಂಪೂರ್ಣಗೊಂಡಿದ್ದು, ಈ ಬಸ್‌ಗಳಲ್ಲಿ ಕೇವಲ ಪಿಯು, ಡಿಗ್ರಿ, ಪಿಜಿ ವಿದ್ಯಾರ್ಥಿಗಳು ಮಾತ್ರ ಪ್ರಯಾಣಿಸಬಹುದಾಗಿದೆ.
5 ಕೋಟಿ ರೂ. ವೆಚ್ಚದ ಯೋಜನೆ
ಕಾಂಗ್ರೆಸ್ ಶಾಸಕ ಹಂಪನಗೌಡ ಬಾದರ್ಲಿರಿಂದ ಈ ವಿನೂತನ ಕಾರ್ಯ ನಡೆದಿದ್ದು, ಸಿಂಧನೂರು ತಾಲೂಕಿನಲ್ಲಿ ಸಂಚರಿಸಲಿರುವ 15 ಹೊಸ ಬಸ್‌ಗಳ ಯೋಜನೆಯನ್ನು ಜನವರಿ 3ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಂಟಾಗುತ್ತಿದ್ದ ಬಸ್ ಕೊರತೆಯನ್ನು ಪರಿಹರಿಸಲು 5 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬಂದಿದೆ. ಈ ಬಸ್‌ಗಳಲ್ಲಿ ಸಾರ್ವಜನಿಕರಿಗೆ ಅವಕಾಶವಿಲ್ಲದೆ ಕೇಲವ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುವುದಾಗಿ ಹೇಳಲಾಗಿದೆ.
ವಿದ್ಯಾರ್ಥಿಗಳ ಹರ್ಷ
ಇದಕ್ಕಾಗಿ ಬಸ್‌ಗಳ ಸಂಚಾರ ದೈನಂದಿನ ಶಕ್ತಿ ಯೋಜನೆ ರೂಪಿಸಲ್ಪಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಬಸ್‌ಗಳ ಕೊರತೆಯಿಂದ ತರಗತಿಗೆ ಹಾಜರಾಗಲು ತೊಂದರೆ ಎದುರಿಸುತ್ತಿದ್ದ ವಿದ್ಯಾರ್ಥಿಗಳಿಗೆ ಪರಿಹಾರ ನೀಡಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಹೊಸ ಬಸ್ ಸೇವೆಯನ್ನು ಖುಷಿಯಿಂದ ಸ್ವಾಗತಿಸಿದ್ದಾರೆ. ವಿದ್ಯಾರ್ಥಿ ರಥ ಯೋಜನೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸುಲಭ, ಸುರಕ್ಷಿತ ಮತ್ತು ಸಮಯಬದ್ಧ ಪ್ರಯಾಣ ಸಿಗುವ ನಿರೀಕ್ಷೆ ವ್ಯಕ್ತವಾಗಿದ್ದು, ಈ ಸೇವೆ ರಾಜ್ಯದ ಬಸ್ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಮಾದರಿಯ ಹೆಜ್ಜೆ ಇಟ್ಟಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.