‘ನಮಗೆ ಮೋಸ ಆಗಿದ್ದು ನಿಜ’; ಪುಷ್ಪಾ ಬಗ್ಗೆ ‘ಕೊತ್ತಲವಾಡಿ’ ಕಲಾವಿದೆ ಸ್ವರ್ಣ ಬೇಸರ
‘ಕೊತ್ತಲವಾಡಿ’ ಸಿನಿಮಾ ಸದ್ದು ಮಾಡಲು ವಿಫಲವಾಗಿದೆ. ಈ ಮಧ್ಯೆ ಕಲಾವಿದರಿಗೆ ಹಣ ನೀಡಿಲ್ಲ ಎಂಬ ಆರೋಪ ಅವರ ವಿರುದ್ಧ ಕೇಳಿ ಬಂದಿದೆ. ಈಗ ‘ಕೊತ್ತಲವಾಡಿ’ ಸಿನಿಮಾ ನಿರ್ಮಾಪಕಿ ಪುಷ್ಪಾ ವಿರುದ್ಧ ಕಲಾವಿದೆ ಸ್ವರ್ಣಾ ಅವರು ಆರೋಪ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಕೊತ್ತಲವಾಡಿ’ ಸಿನಿಮಾ ಕಲಾವಿದರಿಗೆ ನಿರ್ಮಾಪಕಿ ಪುಷ್ಪಾ ಕಡೆಯಿಂದ ಹಣ ಪಾವತಿ ಆಗಿಲ್ಲ ಎಂಬ ಆರೋಪ ಇದೆ. ಹೀಗಿರುವಾಗಲೇ ಈ ಚಿತ್ರದಲ್ಲಿ ನಟಿಸಿದ್ದ ಸ್ವರ್ಣ ಅವರ ಆಡಿಯೋ ವೈರಲ್ ಆಗಿತ್ತು. ಈಗ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ಇಷ್ಟೆಲ್ಲ ದೊಡ್ಡ ಮಟ್ಟದಲ್ಲಿ ಸುದ್ದಿ ಆದರೂ, ನಿರ್ಮಾಪಕರ ಕಡೆಯಿಂದಾಗಲೀ ಅಥವಾ ನಿರ್ದೇಶಕರ ಕಡೆಯಿಂದಾಗಲೀ ಕರೆ ಬಂದಿಲ್ಲ ಎಂದು ಸ್ವರ್ಣಾ ಹೇಳಿದ್ದಾರೆ. ಅಲ್ಲದೆ, ತಮಗೆ ಮೋಸ ಆಗಿದ್ದು ನಿಜ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

