AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prajadhvani Yatre: ದೇವರು ಹೊತ್ತು ಕುಣಿಯುತ್ತಿದ್ದ ಜನರ ಮೇಲೆ ಹಣ ಎಸೆದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

Prajadhvani Yatre: ದೇವರು ಹೊತ್ತು ಕುಣಿಯುತ್ತಿದ್ದ ಜನರ ಮೇಲೆ ಹಣ ಎಸೆದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Mar 29, 2023 | 12:53 PM

Share

ಹಣವನ್ನು ಎಸೆಯುವ ಬದಲು ಕುಣಿಯುತ್ತಿದ್ದ ಜನರನ್ನು ವಾಹನದ ಹತ್ತಿರಕ್ಕೆ ಕರೆದು ನೀಡಿದ್ದರೂ ಆಗುತಿತ್ತು. ಈ ವಿಡಿಯೋ ವೈರಲ್ ಆಗಿದೆ.

ಮಂಡ್ಯ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivakumar) ಮಂಗಳವಾರದಂದು ಪ್ರಜಾಧ್ವನಿ ಯಾತ್ರೆ (Prajadhvani Yatre) ನಡೆಸುತ್ತಿದ್ದಾಗ ತಲೆಮೇಲೆ ದೇವರು ಹೊತ್ತು ಕುಣಿಯುತ್ತಿದ್ದ ಜನರ ಮೇಲೆ ರೂ. 500 ನೋಟುಗಳನ್ನು ಎಸೆದರು. ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ಬೇವಿನಹಳ್ಳಿಯಲ್ಲಿ ಯಾತ್ರೆ ನಡೆಯುತ್ತಿದ್ದಾಗ ಶಿವಕುಮಾರ್ ಹಣವೆಸೆದ ಪ್ರಸಂಗ ಜರುಗಿದೆ. ಹಣವನ್ನು ಎಸೆಯುವ ಬದಲು ಕುಣಿಯುತ್ತಿದ್ದ ಜನರನ್ನು ವಾಹನದ ಹತ್ತಿರಕ್ಕೆ ಕರೆದು ನೀಡಿದ್ದರೂ ಆಗುತಿತ್ತು. ಈ ವಿಡಿಯೋ ವೈರಲ್ ಆಗಿದೆ. ರಾಜ್ಯ ವಿಧಾನ ಸಭೆಗೆ ಮೇ 10 ರಂದು ಮತದಾನ ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 29, 2023 12:52 PM