ಈಡಿ ಮತ್ತು ಸರ್ಕಾರ ನೀಡುತ್ತಿರುವ ಕಿರುಕುಳ ತಾತ್ಕಾಲಿಕ, ಸತ್ಯಕ್ಕೆ ಜಯ ಸಿಗಲಿದೆ: ಡಿಕೆ ಶಿವಕುಮಾರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 21, 2022 | 4:22 PM

ಸರ್ಕಾರ ನೀಡುತ್ತಿರುವ ಕಿರುಕುಳವೆಲ್ಲ ತಾತ್ಕಾಲಿಕ, ಸತ್ಯಕ್ಕೆ ಜಯವಾಗಲಿದೆ ಎಂದ ಅವರು ರಾಹುಲ್ ಮತ್ತು ಸೋನಿಯಾ ಗಾಂಧಿಯವರಿಗೆ ದೈರ್ಯ ತುಂಬಲು, ಅವರೊಂದಿಗೆ ನಾವಿದ್ದೇವೆ ಅಂತ ತೋರಿಸಲು ಕೆಪಿಸಿಸಿ ಪದಾಧಿಕಾರಿಗಳು ಮತ್ತು ಪಕ್ಷದ ಶಾಸಕರನ್ನು ದೆಹಲಿಗೆ ಕರೆಸುತ್ತಿರುವುದಾಗಿ ತಿಳಿಸಿದರು.

New Delhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು (Rahul Gandhi) ಮಂಗಳವಾರದಂದು 5ನೇ ಬಾರಿ ಜಾರಿ ನಿರ್ದೇಶನಾಲಯದ (ED) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಸದ್ಯಕ್ಕೆ ನವದೆಹಲಿಯಲ್ಲೇ ವಾಸ್ತವ್ಯ ಹೂಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಟಿವಿ9 ಕನ್ನಡ ವಾಹಿನಿಯ ದೆಹಲಿ ವರದಿಗಾರೊಂದಿಗೆ ಮಾತಾಡುತ್ತಾ ಒಂದು ಪಕ್ಷ ಈಡಿ ರಾಹುಲ್ ಗಾಂಧಿ ಅವರನ್ನು ಬಂಧಿಸಿದರೆ, ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿದರು. ಸರ್ಕಾರ ನೀಡುತ್ತಿರುವ ಕಿರುಕುಳವೆಲ್ಲ ತಾತ್ಕಾಲಿಕ, ಸತ್ಯಕ್ಕೆ ಜಯವಾಗಲಿದೆ ಎಂದ ಅವರು ರಾಹುಲ್ ಮತ್ತು ಸೋನಿಯಾ ಗಾಂಧಿಯವರಿಗೆ ದೈರ್ಯ ತುಂಬಲು, ಅವರೊಂದಿಗೆ ನಾವಿದ್ದೇವೆ ಅಂತ ತೋರಿಸಲು ಕೆಪಿಸಿಸಿ ಪದಾಧಿಕಾರಿಗಳು ಮತ್ತು ಪಕ್ಷದ ಶಾಸಕರನ್ನು ದೆಹಲಿಗೆ ಕರೆಸುತ್ತಿರುವುದಾಗಿ ತಿಳಿಸಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Jun 21, 2022 04:20 PM