Loading video

ಕೆಪಿಎಸ್​ಸಿಯ ಮತ್ತೊಂದು ಕರ್ಮಕಾಂಡ: ಎಕ್ಸಾಂ ಸೆಂಟರ್​ಗೆ ಬರೋ ಮುನ್ನವೇ ಪ್ರಶ್ನೆ ಪತ್ರಿಕೆ ಬಂಡಲ್ ಓಪನ್

Updated By: ರಮೇಶ್ ಬಿ. ಜವಳಗೇರಾ

Updated on: May 05, 2025 | 5:15 PM

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆಗಳ ಸಂಬಂಧ ಒಂದಲ್ಲ ಒಂದು ಎಡವಟ್ಟು ಮಾಡುತ್ತಲೇ ಇದೆ. ಪ್ರಶ್ನೆ ಪತ್ರಿಕೆಗಳಲ್ಲಿ ಕಂಡು ಬರುವ ಲೋಪದೋಷ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಕೆಪಿಎಸ್ಸಿ ಮೈನ್ಸ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಎಕ್ಸಾಂ ಕೊಠಡಿಗೆ ಬರುವ ಮೊದಲೇ ಕೆಎಎಸ್​ ಪರೀಕ್ಷೆಯ ಪ್ರಬಂಧ ಬರವಣಿಗೆ  ಪ್ರಶ್ನೆ ಪತ್ರಿಕೆ ಬಂಡಲ್ ಓಪನ್ ಆಗಿದೆ ಎಂದು ಆರೋಪಿಸಲಾಗಿದೆ.

ಬೆಂಗಳೂರು, (ಮೇ 05): ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪರೀಕ್ಷೆಗಳ ಸಂಬಂಧ ಒಂದಲ್ಲ ಒಂದು ಎಡವಟ್ಟು ಮಾಡುತ್ತಲೇ ಇದೆ. ಪ್ರಶ್ನೆ ಪತ್ರಿಕೆಗಳಲ್ಲಿ ಕಂಡು ಬರುವ ಲೋಪದೋಷ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಕೆಪಿಎಸ್ಸಿ ಮೈನ್ಸ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಎಕ್ಸಾಂ ಕೊಠಡಿಗೆ ಬರುವ ಮೊದಲೇ ಕೆಎಎಸ್​ ಪರೀಕ್ಷೆಯ ಪ್ರಬಂಧ ಬರವಣಿಗೆ  ಪ್ರಶ್ನೆ ಪತ್ರಿಕೆ ಬಂಡಲ್ ಓಪನ್ ಆಗಿದೆ ಎಂದು ಆರೋಪಿಸಲಾಗಿದೆ. ಬೆಂಗಳೂರಿನ ಕಸ್ತೂರಬಾ ನಗರ BBMP ಕಾಲೇಜಿನಲ್ಲಿ ನಡೆದ ಪರೀಕ್ಷೆ ರೂಮ್​ ನಂಬರ್ 4 ಹಾಗೂ 6ರಲ್ಲಿ ಪ್ರಶ್ನೆ ಪತ್ರಿಕೆಯ ಒಂದು ಬಂಡಲ್ ಓಪನ್ ಆಗಿದೆ. ಎರಡು ಕವರ್​ಗಳ ಪೈಕಿ ಒಂದು ಕವರ್ ಓಪನ್ ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ಮತ್ತು ಅಭ್ಯರ್ಥಿಗಳ ನಡುವೆ ಜಟಾಪಟಿ ನಡೆದಿದೆ.

ಬೆಂಗಳೂರಿನ ಕಸ್ತೂರಿ ನಗರದ ಪರೀಕ್ಷಾ ಕೇಂದ್ರದಲ್ಲಿ ಘಟನೆ ಕೆಪಿಎಸ್ಸಿ ಪರೀಕ್ಷಾ ವೈಖರಿ ವಿರುದ್ಧ ಅಭ್ಯರ್ಥಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಮೇ 3ನೇ ತಾರೀಖಿನಿಂದ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಗಳು ಆರಂಭಗೊಂಡಿವೆ. ಆದ್ರೆ ಇದರ ಮಧ್ಯೆ ಕೆಪಿಎಸ್ಸಿ ಮೈನ್ಸ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂದು ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.