KPSC Scam: ತನಿಖೆ ವೇಳೆ ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್, ಮನೆಯಲ್ಲೇ 20 ಅಂಕಗಳಿಗೆ ಪ್ರಶ್ನೆ

Edited By:

Updated on: Aug 20, 2026 | 6:08 PM

KPSC ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಯಲಾಗಿದೆ. ಇಡಿ (Directorate of Enforcement) ಅಧಿಕಾರಿಗಳ ತನಿಖೆಯ ವೇಳೆ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಲೀಕ್ (Question Paper Leak) ಆಗಿತ್ತಾ? ಅನ್ನೋ ಅನುಮಾನ ಶುರುವಾಗಿದೆ. ಅಷ್ಟೇ ಅಲ್ಲದೇ ಅಭ್ಯರ್ಥಿಗಳಿಗೆ ರೆಸಾರ್ಟ್ (Resort) ಒಂದರಲ್ಲಿ ತರಬೇತಿ ನೀಡಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು, ಇಡಿ ಅಧಿಕಾರಿಗಳು ಈ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ. ಇನ್ನೊಂದೆಡೆ ಎಫ್ಐಆರ್ ರದ್ದು ಕೋರಿ ಕೆ.ಆರ್.ಲೋಕೇಶ್ ಸೇರಿ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದು, KPSC ಹಗರಣದ ತನಿಖೆ ವೇಳೆ ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್ ಮಾಡಲಾಗಿದೆ ಎಂದು ಹೈಕೋರ್ಟ್​​ಗೆ ಅಭ್ಯರ್ಥಿಗಳ ಪರ ವಕೀಲರು ಮಾಹಿತಿ ನೀಡಿದ್ದಾರೆ.

ಬೆಂಗಳೂರು, (ಆಗಸ್ಟ್ 20): KPSC ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಯಲಾಗಿದೆ. ಇಡಿ (Directorate of Enforcement) ಅಧಿಕಾರಿಗಳ ತನಿಖೆಯ ವೇಳೆ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಲೀಕ್ (Question Paper Leak) ಆಗಿತ್ತಾ? ಅನ್ನೋ ಅನುಮಾನ ಶುರುವಾಗಿದೆ. ಅಷ್ಟೇ ಅಲ್ಲದೇ ಅಭ್ಯರ್ಥಿಗಳಿಗೆ ರೆಸಾರ್ಟ್ (Resort) ಒಂದರಲ್ಲಿ ತರಬೇತಿ ನೀಡಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು, ಇಡಿ ಅಧಿಕಾರಿಗಳು ಈ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ. ಇನ್ನೊಂದೆಡೆ ಎಫ್ಐಆರ್ ರದ್ದು ಕೋರಿ ಕೆ.ಆರ್.ಲೋಕೇಶ್ ಸೇರಿ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದು, KPSC ಹಗರಣದ ತನಿಖೆ ವೇಳೆ ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್ ಮಾಡಲಾಗಿದೆ ಎಂದು ಹೈಕೋರ್ಟ್​​ಗೆ ಅಭ್ಯರ್ಥಿಗಳ ಪರ ವಕೀಲರು ಮಾಹಿತಿ ನೀಡಿದ್ದಾರೆ.

ಇಡಿ ಅಭ್ಯರ್ಥಿಗಳ ನಿವಾಸದ ಮೇಲೂ ದಾಳಿ ನಡೆಸಿದ್ದು, ಮನೆಯಲ್ಲಿ 20 ಅಂಕಗಳಿಗೆ ಪ್ರಶ್ನೆ ಕೇಳಿದ್ದರು.
ಅಭ್ಯರ್ಥಿಗಳು ಅದಕ್ಕೆ ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದು ಎಫ್‌ಐಆರ್​ನಲ್ಲಿರುವ ಅಭ್ಯರ್ಥಿಗಳ ಪರ ವಕೀಲ ರಜತ್ ವಾದ ಮಂಡಿಸಿದರು. ಇಡಿ ಕೂಡ ನಿಮಗೆ ಟೆಸ್ಟ್ ನೀಡಿದ್ದರಾ ಎಂದು ಪ್ರಶ್ನಿಸಿದ ಕೋರ್ಟ್, ಕೆಪಿಎಸ್‌ಸಿ ಸಂಸ್ಥೆಯ ಅಕ್ರಮಗಳು ನಿಲ್ಲಬೇಕು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದ್ದು, ಪೊಲೀಸರ ತನಿಖೆಯ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಆಗಸ್ಟ್ 27ಕ್ಕೆ ಮುಂದೂಡಿದೆ.

ಇದನ್ನೂ ಓದಿ: KPSC ಕರ್ಮಕಾಂಡ: ಇಡಿ ತನಿಖೆ ವೇಳೆ ಬಯಲಾಯ್ತು ಮತ್ತಷ್ಟು ಸ್ಫೋಟಕ ವಿಚಾರ

Loading...
Unable to load recommendations.
Follow Us