ವೈದ್ಯೆ ಕೊಲೆ ಕೇಸ್: ಆರೋಪಿ ಡಾ.ಮಹೇಂದ್ರ ರೆಡ್ಡಿ ಕುಟುಂಬಸ್ಥರ ಮೇಲೆ ಕೃತಿಕಾ ತಾಯಿ ಗಂಭೀರ ಆರೋಪ
ಕೃತಿಕಾ ರೆಡ್ಡಿ ಕೊಲೆ ಕೇಸ್ ಸಂಬಂಧ ಆಕೆಯ ತಾಯಿ ಸ್ಫೋಟಕ ಮಾಹಿತಿ ನೀಡಿದ್ದಾರೆ. ಆರೋಪಿ ಮಹೇಂದ್ರ ರೆಡ್ಡಿ ಕುಟುಂಬಸ್ಥರಿಗೆ ಕ್ರಿಮಿನಲ್ ಹಿನ್ನಲೆ ಇದೆ. ಆತನ ಸಹೋದರ ಹುಡುಗಿಯೊಬ್ಬಳಿಗೆ ಮೋಸ ಮಾಡಿದ್ದ. ಈಗ ಅದನ್ನು ಸೆಟಲ್ಮೆಂಟ್ ಮಾಡಿಕೊಂಡಿದ್ದಾನೆ. ಹೀಗೆ ಎಷ್ಟು ಜನರಿಗೆ ಅವರು ಮೋಸ ಮಾಡಿದ್ದಾರೆ ಗೊತ್ತಿಲ್ಲ. ನನ್ನ ಮಗಳಿಗೆ ಆದಂತೆ ಬೇರೆಯವರಿಗೆ ಆಗಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 19: ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಕೇಸ್ಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಆರೋಪಿ ಡಾ. ಮಹೇಂದ್ರ ರೆಡ್ಡಿ ಸಹೋದರನಿಗೂ ಕ್ರಿಮಿನಲ್ ಹಿನ್ನಲೆ ಇದೆ ಎಂದು ಕೃತಿಕಾ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಾಣ ಉಳಿಸುವವರೇ ಪ್ರಾಣ ತೆಗೆಯುವ ಕೆಲಸ ಮಾಡಿದ್ದಾರೆ. ಮಹೇಂದ್ರ ರೆಡ್ಡಿ ಸಹೋದರನ ಮೇಲೂ ಹುಡುಗಿಗೆ ಮೋಸ ಮಾಡಿದ ಆರೋಪವಿದೆ. 20 ಲಕ್ಷ ಕೊಟ್ಟು ಆತ ಈಗ ಕೇಸ್ನ ಸೆಟಲ್ಮೆಂಟ್ ಮಾಡಿಕೊಂಡಿದ್ದಾನೆ. ಅವರದ್ದೇ ಮೆಡಿಕಲ್ ಸ್ಟೋರ್ ಇದ್ದು ಕೃತಿಕಾ ಕೊಲೆಗೆ ಬಳಸಲಾದ ಅನಸ್ತೇಶಿಯಾ ಅಲ್ಲಿಂದಲೇ ತಂದಿರಬಹುದು. ಮಹೇಂದ್ರ ರೆಡ್ಡಿ ಈ ಹಿಂದೆ ಎಷ್ಟು ಜನ ಹುಡುಗಿಯರಿಗೆ ಮೋಸ ಮಾಡಿದ್ದಾನೆ ಎಂಬ ಬಗ್ಗೆಯೂ ತನಿಖೆ ಆಗಬೇಕು. ಅವನಿಗೆ ಇಷ್ಟ ಇಲ್ಲದಿದ್ದರೆ ನಮ್ಮ ಬಳಿ ಹೇಳಬೇಕಿತ್ತು, ಅದನ್ನು ಬಿಟ್ಟು ಈ ರೀತಿ ಕೊಲೆ ಮಾಡಿರೋದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

