ಯಾರು ಹಣ ಕೊಡ್ತಾರೋ ಅವರನ್ನು ಕೇಳ್ತೇವೆ. ಕೊಡದೇ ಇದ್ದವರನ್ನು ಯಾಕೆ ಕೇಳೋಣ? ಬೆಂಗಳೂರು ನಗರ ಜಿ.ಪಂ. ಅಧ್ಯಕ್ಷ ಮರಿಸ್ವಾಮಿ ಹೇಳಿಕೆ

ಸಾಧು ಶ್ರೀನಾಥ್​
|

Updated on: Apr 02, 2021 | 12:38 PM

ಟಿವಿನೈನ್ ಗೆ ಬೆಂಗಳೂರು ನಗರ ಜಿ.ಪಂ. ಅಧ್ಯಕ್ಷ ಮರಿಸ್ವಾಮಿ ಹೇಳಿಕೆ: ಯಡಿಯೂರಪ್ಪನವರು ಬೆಂಗಳೂರು ಉಸ್ತುವಾರಿ ಸಚಿವರು. ಕೆಡಿಪಿ ಸಭೆ ಸಮಯದಲ್ಲಿ ಅಭಿವೃದ್ಧಿಗೆ ಎಲ್ಲಾ ಜಿ.ಪಂ. ಸದಸ್ಯರು ೨೦೦ ಕೋಟಿ ಹಣ ಬಿಡುಗಡೆ ಮಾಡಲು ಮನವಿ ಮಾಡಿದ್ದರು. ನಾನು ಈಶ್ವರಪ್ಪ ಅವರನ್ನು ಮೂರ್ನಾಲ್ಕು ಬಾರಿ ಹಣ ಬಿಡುಗಡೆ ಮಾಡಿ ಅಂತಾ ಕೇಳಿದ್ದೆ. ಆಗ ಅವರು ನೀನು ಸಿಎಂ ಹತ್ತಿರ ಇದ್ದಿಯಾ. ಅಲ್ಲೇ ಬಿಡುಗಡೆ ಮಾಡಿಸಿಕೋ ಅಂತಾ ಹೇಳಿದ್ದರು. ಸಚಿವರಿಗೆ ಹಣ ನೀಡಲು‌ ಸಾಧ್ಯವಾಗದಿದ್ದಾಗ ರಾಜ್ಯದಲ್ಲಿ ಯಾವುದೇ ಇಲಾಖೆಗೆ ಹಣ ಬಿಡುಗಡೆ ‌ಮಾಡಲು ಸಿಎಂಗೆ ಪರಮಾಧಿಕಾರ ಇದೆ. ಯಾರು ಹಣ ಕೊಡ್ತಾರೋ ಅವರನ್ನು ಕೇಳ್ತೇವೆ. ಕೊಡದೇ ಇದ್ದವರನ್ನು ಯಾಕೆ ಕೇಳೋಣ?