Sign In

By signing in or creating an account, you agree with Associated Broadcasting Company's Terms & Conditions and Privacy Policy.

Lok Sabha Election: ಮನೆಯಲ್ಲಿ ವಿಶೇಷ ಪೂಜೆ ನಡೆಸಿ ಹಾಡು ಹಾಡಿದ ಈಶ್ವರಪ್ಪ ಕುಟುಂಬ

Lok Sabha Election: ಮನೆಯಲ್ಲಿ ವಿಶೇಷ ಪೂಜೆ ನಡೆಸಿ ಹಾಡು ಹಾಡಿದ ಈಶ್ವರಪ್ಪ ಕುಟುಂಬ

TV9 Web
| Updated By: ಆಯೇಷಾ ಬಾನು

Updated on: May 07, 2024 | 9:31 AM

ಶಿವಮೊಗ್ಗ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ತಮ್ಮ ಶಿವಮೊಗ್ಗ ನಗರದ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವರ ಹಾಡು ಹಾಡಿತ್ತ ಈಶ್ವರಪ್ಪ ಕುಟುಂಬ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮತದಾನ ಮಾಡಿದ್ದಾರೆ. ಕೆ.ಎಸ್​. ಈಶ್ವರಪ್ಪ ಅವರಿಗೆ ಪತ್ನಿ ಜಯಲಕ್ಷ್ಮಿ, ಪುತ್ರ ಕಾಂತೇಶ್, ಸೊಸೆ ಶಾಲಿನಿ, ಹೆಣ್ಣು ಮಕ್ಕಳಾದ ಜ್ಯೋತಿ, ಶಾಂತಾ ಸಾಥ್ ನೀಡಿದ್ದಾರೆ.

ಶಿವಮೊಗ್ಗ, ಮೇ.07: ಇಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿದೆ. ಇಂದು ಬೆಳಗ್ಗೆ 7 ಗಂಟೆಯಿಂದ 14 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದ್ದು, ಒಟ್ಟು 206 ಪುರುಷ ಅಭ್ಯರ್ಥಿಗಳು ಹಾಗೂ 21 ಮಹಿಳಾ ಅಭ್ಯರ್ಥಿಗಳು ಸೇರಿ ಒಟ್ಟು 227 ಅಭ್ಯರ್ಥಿಗಳ ಭವಿಷ್ಯ ಇಂದು ಮತದಾರ ಬರೆಯಲಿದ್ದಾನೆ. ಒಟ್ಟು 2,59,52,958 ಮತದಾರರು ಇಂದು ತಮ್ಮ ತೀರ್ಪು ಬರೆಯಲಿದ್ದಾರೆ. ಮತ್ತೊಂದೆಡೆ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ತಮ್ಮ ಶಿವಮೊಗ್ಗ ನಗರದ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವರ ಹಾಡು ಹಾಡಿತ್ತ ಈಶ್ವರಪ್ಪ ಕುಟುಂಬ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಮತದಾನ ಮಾಡಿದ್ದಾರೆ. ಕೆ.ಎಸ್​. ಈಶ್ವರಪ್ಪ ಅವರಿಗೆ ಪತ್ನಿ ಜಯಲಕ್ಷ್ಮಿ, ಪುತ್ರ ಕಾಂತೇಶ್, ಸೊಸೆ ಶಾಲಿನಿ, ಹೆಣ್ಣು ಮಕ್ಕಳಾದ ಜ್ಯೋತಿ, ಶಾಂತಾ ಸಾಥ್ ನೀಡಿದ್ದಾರೆ.

ಶಿವಮೊಗ್ಗ ಮೂವರು ಘಟಾನುಘಟಿ ಸ್ಪರ್ಧೆಯಿಂದ ರಂಗೇರಿದೆ. ಒಂದು ಕಡೆ ಬಂಗಾರಪ್ಪ ಫ್ಯಾಮಿಲಿ ವರ್ಸಸ್ ಬಿಎಸ್​ವೈ ಫ್ಯಾಮಿಲಿ ಅಂತಿದ್ರೆ, ಮತ್ತೊಂದು ಕಡೆ ಯಡಿಯೂರಪ್ಪ ವಿರುದ್ಧ ರೆಬೆಲ್​ ಆಗಿರುವ ಈಶ್ವರಪ್ಪ ಅಗ್ನಿ ಪರೀಕ್ಷೆಗೆ ಇಳಿದಿರೋದು ಕದನ ಕಣ ಮತ್ತಷ್ಟು ಬಿಸಿ ಏರುವಂತೆ ಮಾಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ