ಈಶ್ವರಪ್ಪ ನೊಂದುಕೊಂಡಿದ್ದಾರೆ, ಅವರು ಹೇಳಿಕೊಂಡಿರುವ ನೋವನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ: ಸಿಟಿ ರವಿ
ತಾವೆಲ್ಲ ಸಿದ್ಧಾಂತಕ್ಕಾಗಿ ಬಿಜೆಪಿಯನ್ನು ಆರಿಸಿಕೊಂಡಿದ್ದು, ಕಳೆದ 10 ವರ್ಷಗಳ ಅವಧಿಯಲ್ಲಿ ಭಾರತ ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ಕಂಡಿದೆ, ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಕೆಲಸವನ್ನು ಇಡೀ ವಿಶ್ವವೇ ಬೆರಗುಗಣ್ಣಿಂದ ನೋಡುತ್ತಿದೆ. ಅವರನ್ನು ಪುನಃ ಪ್ರಧಾನಿಯಾಗಿ ಮಾಡಲು ಮತ್ತು ಬಿಜೆಪಿಯನ್ನು ಅಧಿಕಾರಕ್ಕೆ ತರಲು ತಾವೆಲ್ಲ ಅದೇ ನಿಷ್ಠೆಯಿಂದ ಶ್ರಮಿಸುವುದಾಗಿ ರವಿ ಹೇಳಿದರು.
ಬೆಂಗಳೂರು: ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪರ (KS Eshwarappa) ಬೆಂಗಳೂರು ಮನೆಗೆ ಬಿಜೆಪಿ ನಾಯಕರು ಭೇಟಿ ನೀಡುತ್ತಿರೋದು ಯಾಕೆ ಅಂತ ಎಲ್ಲರಿಗೂ ಗೊತ್ತು. ಮಗ ಕಾಂತೇಶ್ ಗೆ ಟಿಕೆಟ್ ಸಿಗದ ಕಾರಣ ಭ್ರಮಮಿರಸನಗೊಂಡಿದ್ದಾರೆ ಮತ್ತು ಬೇಸರ ಕೂಡ ಆಗಿದೆ. ಈಶ್ವರಪ್ಪರನ್ನು ಸಮಾಧಾನಪಡಿಸಲು ಸಿಟಿ ರವಿ (CT Ravi ) ಮತ್ತು ಡಿವಿ ಸದಾನಂದ ಗೌಡ (DV Sadananda Gowda) ಇಂದು ಮಾಜಿ ಸಚಿವನ ಬೆಂಗಳೂರು ನಿವಾಸಕ್ಕೆ ದೌಡಾಯಿಸಿದ್ದರು. ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರವಿ, ಕಳೆದ 4 ದಶಕಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿ ಅದನ್ನು ಕಟ್ಟಿ ಬೆಳೆಸುವುದರಲ್ಲಿ ಈಶ್ವರಪ್ಪ ದೊಡ್ಡ ಪಾತ್ರ ನಿರ್ವಹಿಸಿದ್ದಾರೆ, ಟಿಕೆಟ್ ಸಿಗದಿರುವದು ಸಹಜವಾಗೇ ಅವರಲ್ಲಿ ನಿರಾಸೆ ಮೂಡಿಸಿದೆ, ತಮ್ಮ ನೋವನ್ನು ಅವರು ತೋಡಿಕೊಂಡಿದ್ದಾರೆ, ಅದನ್ನು ವಿಜಯೇಂದ್ರ ಮತ್ತು ಪಕ್ಷದ ವರಿಷ್ಠರಿಗೆ ತಿಳಿಸುವ ಕೆಲಸ ತಾನು ಮಾಡೋದಾಗಿ ಹೇಳಿದರು. ತಾವೆಲ್ಲ ಸಿದ್ಧಾಂತಕ್ಕಾಗಿ ಬಿಜೆಪಿಯನ್ನು ಆರಿಸಿಕೊಂಡಿದ್ದು, ಕಳೆದ 10 ವರ್ಷಗಳ ಅವಧಿಯಲ್ಲಿ ಭಾರತ ಹಿಂದೆಂದೂ ಕಾಣದ ಅಭಿವೃದ್ಧಿಯನ್ನು ಕಂಡಿದೆ, ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಕೆಲಸವನ್ನು ಇಡೀ ವಿಶ್ವವೇ ಬೆರಗುಗಣ್ಣಿಂದ ನೋಡುತ್ತಿದೆ. ಅವರನ್ನು ಪುನಃ ಪ್ರಧಾನಿಯಾಗಿ ಮಾಡಲು ಮತ್ತು ಬಿಜೆಪಿಯನ್ನು ಅಧಿಕಾರಕ್ಕೆ ತರಲು ತಾವೆಲ್ಲ ಅದೇ ನಿಷ್ಠೆಯಿಂದ ಶ್ರಮಿಸುವುದಾಗಿ ರವಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೆಎಸ್ ಈಶ್ವರಪ್ಪ ವಿರುದ್ಧದ ಎಫ್ಐಆರ್ಗೆ ತಡೆ; ಆಕ್ಷೇಪಾರ್ಹ ಹೇಳಿಕೆ ನೀಡುವ ರಾಜಕಾರಣಿಗಳಿಗೆ ಹೈಕೋರ್ಟ್ ತರಾಟೆ