ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಹೀಗಾದ್ರೆ ಸುಮ್ನೆ ಇರ್ತೀರಾ? ಮತಾಂತರ ನಿಷೇಧ ಕಾಯ್ದೆ ವಿರೋಧಿಸುವವರ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಕೆಂಡಾಮಂಡಲ
ಯಾರನ್ನೂ ಕೂಡ ಬಲವಂತವಾಗಿ ಮತಾಂತರ ಮಾಡಬಾರದು. ಅಸೆ, ಆಮಿಷವೊಡ್ಡಿ, ಬಡತನ ದುರಪಯೋಗ ಪಡಿಸಿಕೊಂಡು ಮತಾಂತರ ಮಾಡಬಾರದು. ಕಾನೂನುಬದ್ದವಾಗಿ ಮತಾಂತರ ಮಾಡಬಹುದು ಕದ್ದುಮುಚ್ಚಿ ಮತಾಂತರ ಮಾಡುವಂತಿಲ್ಲ. -ಸಚಿವ ಕೆ.ಎಸ್.ಈಶ್ವರಪ್ಪ
ಬೆಂಗಳೂರು: ಯಾರನ್ನೂ ಬಲವಂತವಾಗಿ ಮತಾಂತರ ಮಾಡಬಾರದು. ಕಾನೂನುಬದ್ಧವಾಗಿ ಮತಾಂತರ ಮಾಡಬಹುದು ಎಂದು ಸುವರ್ಣಸೌಧದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಹಾಗೂ ಇದೇ ವೇಳೆ ಮತಾಂತರ ನಿಷೇಧ ಕಾಯ್ದೆ ವಿರೋಧಿಸುತ್ತಿರುವವರ ಮೇಲೆ ಸಚಿವ ಈಶ್ವರಪ್ಪ ಆಕ್ರೋಶ ಹೊರ ಹಾಕಿದ್ದಾರೆ.
ಯಾರನ್ನೂ ಕೂಡ ಬಲವಂತವಾಗಿ ಮತಾಂತರ ಮಾಡಬಾರದು. ಅಸೆ, ಆಮಿಷವೊಡ್ಡಿ, ಬಡತನ ದುರಪಯೋಗ ಪಡಿಸಿಕೊಂಡು ಮತಾಂತರ ಮಾಡಬಾರದು. ಕಾನೂನುಬದ್ದವಾಗಿ ಮತಾಂತರ ಮಾಡಬಹುದು ಕದ್ದುಮುಚ್ಚಿ ಮತಾಂತರ ಮಾಡುವಂತಿಲ್ಲ. ಅರ್ಜಿ ಹಾಕಿ ಮತಾಂತರ ಆಗಬಹುದು. ಅರ್ಜಿ ಹಾಕಿದ 2 ತಿಂಗಳವೊಳಗೆ ಮನಪರಿವರ್ತನೆಯಾಗಿ ವಾಪಸ್ ಪಡೆಯಬಹುದು. ಜೆಡಿಎಸ್, ಕಾಂಗ್ರೆಸ್ ಯಾಕೆ ವಿರೋಧ ಮಾಡ್ತಿದ್ದಾರೆ ಗೊತ್ತಿಲ್ಲ. ಹೆಣ್ಣುಮಕ್ಕಳನ್ನ ಮತಾಂತರ ಮಾಡಿ ದೇಹ ದುರ್ಬಳಕೆ ಮಾಡಿಕೊಂಡು ಹೆಣ್ಣು ಮಕ್ಕಳನ್ನ ಮತಾಂತರ ಹೆಸರಲ್ಲಿ ಹಾಳು ಮಾಡುತ್ತಿದ್ದಾರೆ. ಬಹುಷಃ ಇದು ಡಿಕೆ ಶಿವಕುಮಾರ್ ಗೆ ಗೊತ್ತಿಲ್ಲ. ನಾನು ಡಿಕೆಶಿಗೆ ಅಂಥಹ ಹೆಣ್ಣು ಮಕ್ಕಳ ದುಸ್ಥಿತಿಯನ್ನ ತೋರಿಸ್ತಿನಿ. ಅವರಿಗೆ ಇದು ಗೊತ್ತಿಲ್ಲ ಅದಕ್ಕೆ ವಿರೋಧ ಮಾಡ್ತಿದ್ದಾರೆ. ಆಸೆ, ಆಮಿಷ ಬಲವಂತದಿಂದ ಮತಾಂತರ ಮಾಡುವಂತಿಲ್ಲ
ಈ ಉದ್ದೇಶದಿಂದ ಈ ಬಿಲ್ ಮಂಡಿಸಲಾಗುತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ರು.