ಕೆ-ಸೆಟ್ ಪರೀಕ್ಷೆ: ಮೂಗುತಿ, ಕಿವಿಯೋಲೆ ಧರಿಸಿ ಬಂದವರಿಗೆ ಬಳ್ಳಾರಿಯಲ್ಲಿ ಶಾಕ್
ಕೆ-ಸೆಟ್ ಪರೀಕ್ಷೆ ಬರೆಯಲು ಬಂದ ಪರೀಕ್ಷಾರ್ಥಿಗಳು ಸಿಬ್ಬಂದಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯರು ಧರಿಸಿ ಬಂದಿದ್ದ ಮೂಗುತಿ, ಕಿವಿಯೋಲೆಗಳನ್ನ ತೆಗೆಸಲಾಗಿದೆ. ಕುತ್ತಿಗೆಯಲ್ಲಿದ್ದ ದೇವರ ದಾರವನ್ನೂ ಸಹ ಬಿಟ್ಟಿಲ್ಲ. ಹುಡುಗರ ಕೈಲಿದ್ದ ಕಡಗಕ್ಕೂ ಅನುಮತಿ ಇಲ್ಲ ಎಂದು ಅದನ್ನ ತೆಗೆಸಿರೋದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ, ನವೆಂಬರ್ 02: ಮೂಗುತಿ, ಕಿವಿಯೋಲೆ ಧರಿಸಿ ಕೆ-ಸೆಟ್ ಪರೀಕ್ಷೆ ಬರೆಯಲೆಂದು ಬಂದಿದ್ದ ಪರೀಕ್ಷಾರ್ಥಿಗಳಿಗೆ ಸಿಬ್ಬಂದಿ ಶಾಕ್ ಕೊಟ್ಟ ಪ್ರಸಂಗ ಬಳ್ಳಾರಿಯಲ್ಲಿ ನಡೆದಿದೆ. ಕೈ ಕಡಗ ಹಾಗೂ ಯುವತಿಯರ ಮೂಗುತಿ, ಕಿವಿಯೋಲೆಯನ್ನ ಸಿಬ್ಬಂದಿ ತೆಗೆಸಿದ್ದಾರೆ. ದೇವರ ದಾರವನ್ನೂ ಸಹ ಬಿಚ್ಚಿಸಿ ಪರೀಕ್ಷಾ ಕೊಠಡಿಯ ಒಳಗೆ ಕಳುಹಿಸಲಾಗಿದ್ದು, ಅಸಮಾಧಾನದ ನಡುವೆಯೂ ಅನಿವಾರ್ಯವಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 02, 2025 12:34 PM
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
