AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟನಲ್ ರಸ್ತೆಗಾಗಿ ಲಾಲ್​ಬಾಗ್​​ನ 6 ಎಕರೆ ಬಳಸಲು ಪರ್ಮಿಷನ್ ಕೊಟ್ರಾ? ಜಂಟಿ ನಿರ್ದೇಶಕರಿಗೆ ಅಶೋಕ್ ಪ್ರಶ್ನೆ!

ಟನಲ್ ರಸ್ತೆಗಾಗಿ ಲಾಲ್​ಬಾಗ್​​ನ 6 ಎಕರೆ ಬಳಸಲು ಪರ್ಮಿಷನ್ ಕೊಟ್ರಾ? ಜಂಟಿ ನಿರ್ದೇಶಕರಿಗೆ ಅಶೋಕ್ ಪ್ರಶ್ನೆ!

ಭಾವನಾ ಹೆಗಡೆ
|

Updated on: Nov 02, 2025 | 11:28 AM

Share

ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಪ್ರಸ್ತಾವಿತ ಸುರಂಗ ರಸ್ತೆ ನಿರ್ಮಾಣಕ್ಕೆ 6 ಎಕರೆ ಭೂಮಿ ಬಳಕೆ ಬಗ್ಗೆ ಶಾಸಕ ಆರ್. ಅಶೋಕ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಹಾರ್ಟಿಕಲ್ಚರ್ ಇಲಾಖೆಯ ಜಂಟಿ ನಿರ್ದೇಶಕರನ್ನು ಪ್ರಶ್ನಿಸಿದ ಅಶೋಕ್, ಲಾಲ್​ಬಾಗ್​​ನ ಐತಿಹಾಸಿಕ ಮಹತ್ವ, ಪುರಾತನ ಬಂಡೆ ಮತ್ತು ಕೆಂಪೇಗೌಡ ಗೋಪುರದಂತಹ ಸ್ಮಾರಕಗಳ ರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದರು. ಯೋಜನೆಗೆ ಇನ್ನೂ ಅನುಮತಿ ನೀಡಿಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ.

 ಬೆಂಗಳೂರು, ನವೆಂಬರ್ 02:  ಬೆಂಗಳೂರಿನ ಐತಿಹಾಸಿಕ ಲಾಲ್​​ಬಾಗ್ (Lalbhag) ಸುರಂಗ ರಸ್ತೆ ನಿರ್ಮಾಣಕ್ಕೆ ಸುಮಾರು 6 ಎಕರೆ ಭೂಮಿ ಬಳಸುವ ಯೋಚನೆಯು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು  ವಿಪಕ್ಷ ನಾಯಕ ಆರ್. ಅಶೋಕ್ ಅವರು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರನ್ನು ಪ್ರಶ್ನಿಸಿದ್ದು, ಯೋಜನೆಗೆ ಇಲಾಖೆಯಿಂದ ಅನುಮತಿ ನೀಡಲಾಗಿದೆಯೇ ಎಂದು ಕೇಳಿದ್ದಾರೆ. ಲಾಲ್​ಬಾಗ್​​ನಲ್ಲಿ  300 ದಶಲಕ್ಷ ವರ್ಷಗಳಷ್ಟು ಹಳೆಯದಾದ ಬಂಡೆ ಮತ್ತು 200 ವರ್ಷಗಳಷ್ಟು ಹಳೆಯ ಕೆಂಪೇಗೌಡ ಗೋಪುರವೂ ಇದೆ. ಸುರಂಗ ರಸ್ತೆ ಯೋಜನೆಯು ಲಾಲ್​ಬಾಗ್​​ನ ಪ್ರಮುಖ ಪ್ರವೇಶದ್ವಾರದಿಂದ ಎಂ.ಟಿ.ಆರ್ ಗೇಟ್ ಮತ್ತು ಸಿದ್ದಾಪುರ ಗೇಟ್‌ವರೆಗೆ ಹಾದುಹೋಗಲಿದೆ ಎಂದು ಹೇಳಿದ್ದಾರೆ.

ಇದಕ್ಕುತ್ತರಿಸಿರುವ ಜಂಟಿ ನಿರ್ದೇಶಕರು, ಇಲಾಖೆಯು ಇನ್ನು ಯಾವುದೇ ಪ್ರಾಜೆಕ್ಟ್ ವರದಿ ಅಥವಾ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನುಮತಿ ನೀಡುವ ಮೊದಲೇ ಯೋಜನೆಯ ಟೆಂಡರ್ ಪ್ರಕ್ರಿಯೆ ಆರಂಭವಾಗಿರುವುದು ಅಶೋಕ್ ಅವರ ಆಕ್ಷೇಪಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.