ಶಾಲೆಗೆ ಹೋಗುತ್ತಿದ್ದ ಬಾಲಕಿಯ ಸೈಕಲ್ ಚೈನ್ ಕಳಚಿದಾಗ ಸಹಾಯ ಮಾಡಿದ್ದು ಇಬ್ಬರು ಕೆಎಸ್ ಅರ್ ಪಿ ಪೇದೆಗಳು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 13, 2022 | 11:18 AM

ವಿದ್ಯಾರ್ಥಿನಿಯೊಬ್ಬಳಿಗೆ ಇಂಥ ಸಮಸ್ಯೆ ಎದುರಾದಾಗ ಕೆ ಎಸ್ ಆರ್ ಪಿ ಯ ಇಬ್ಬರು ಪೇದೆಗಳು ಆಕೆಗೆ ಸಹಾಯ ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ.

ಹಾಸನ:  ಸೈಕಲ್ ಓಡಿಸುವಾಗ ಅದರ ಚೈನ್ ಕಳಚಿ ಬೀಳುವುದು ಒಂದು ಸಾಮಾನ್ಯ ಸಂಗತಿಯೇ. ಆದರೆ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಬಾಲಕಿಯರಿಗೆ ಕಳಚಿದ ಚೈನನ್ನು ಜೋಡಿಸಿಕೊಳ್ಳಲು ಬರುವುದಿಲ್ಲ. ಹಾಸನದ (Hassan) ಪೆನ್ಷನ್ ಮೊಹಲ್ಲಾದಲ್ಲಿ ಶನಿವಾರ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಇಂಥ ಸಮಸ್ಯೆ ಎದುರಾದಾಗ ಕೆ ಎಸ್ ಆರ್ ಪಿ ಯ (KSRP) ಇಬ್ಬರು ಪೇದೆಗಳು (cops) ಆಕೆಗೆ ಸಹಾಯ ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ. ಹಾಸನದ ಎಸ್ ಪಿ ಹರಿರಾಂ ಶಂಕರ್ ಪೇದೆಗಳ ಕೆಲಸವನ್ನು ಕೊಂಡಾಡಿದ್ದಾರೆ.