ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ಬಸ್‌ಗಳು ರಸ್ತೆಗಿಳಿಯಲು ಸಿದ್ಧ

Updated on: Oct 30, 2024 | 8:57 AM

KSRTC Airavat Club Class 2.O: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್​ಆರ್​ಟಿಸಿ) 20 ಹೊಸ ವೋಲ್ವೋ ಮಲ್ಟಿ-ಆಕ್ಸಲ್ ಐರಾವತ ಕ್ಲಬ್ ಕ್ಲಾಸ್ 2.0 ಸೀಟರ್ ಬಸ್‌ಗಳಿಗೆ ಚಾಲನೆ ನೀಡಲಿದೆ. ರಸ್ತೆಗಿಳಿಯಲು ಸಿದ್ಧವಾಗಿರುವ ಹೊಸ ಬಸ್​​ಗಳ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.

ಬೆಂಗಳೂರು, ಅಕ್ಟೋಬರ್ 30: ಕೆಎಸ್​ಆರ್​ಟಿಸಿ ಹೊಸ ಐರಾವತ ಕ್ಲಬ್ ಕ್ಲಾಸ್ 2.0 ಆವೃತ್ತಿಯ 20 ಬಸ್​ಗಳನ್ನು ಇಂದು ಲೋಕಾರ್ಪಣೆಗೊಳಿಸುತ್ತಿದೆ. ಹೊಸ ಬಸ್‌ಗಳು ಜನಪ್ರಿಯ ಐರಾವತ್ ಕ್ಲಬ್ ಕ್ಲಾಸ್‌ನ ನವೀಕರಿಸಿದ ಆವೃತ್ತಿ (2.0) ಆಗಿದೆ. ಐರಾವತ್ ಕ್ಲಬ್ ಕ್ಲಾಸ್‌ ಅನ್ನು ಮೊದಲು 2003-04 ರಲ್ಲಿ ಕೆಎಸ್​ಆರ್​ಟಿಸಿ ರಸ್ತೆಗಿಳಿಸಿತ್ತು.

ಬಸ್‌ಗಳು ವೋಲ್ವೋದ ‘9600 ಸರಣಿ’ಯ ಭಾಗವಾಗಿದ್ದು, ಕೆಎಸ್​ಆರ್​ಟಿಸಿಯ ಪ್ರಮುಖ ಅಂಬಾರಿ ಉತ್ಸವದ ಅದೇ ಸರಣಿಯಾಗಿದೆ. ಪ್ರತಿ ಬಸ್‌ಗೆ 1.78 ಕೋಟಿ ರೂ. ವ್ಯಯಿಸಲಾಗಿದೆ.

ಹೊಸ ಬಸ್‌ಗಳು ಅಸ್ತಿತ್ವದಲ್ಲಿರುವ ಐರಾವತ್ ಕ್ಲಬ್ ಕ್ಲಾಸ್ ಲೋಗೋವನ್ನೇ ಹೊಂದಿರಲಿದ್ದು, ಅದೇ ಬ್ರ್ಯಾಂಡಿಂಗ್​ನಡಿ ಇರಲಿದೆ. ಆದರೆ ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (ಎಫ್‌ಎಪಿಎಸ್) ಸೇರಿದಂತೆ ಕೆಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿವೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More