Daily Devotional: ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
ಸಾಲಿಗ್ರಾಮವು ಹಿಂದೂ ಧರ್ಮದಲ್ಲಿ ವಿಷ್ಣುವಿನ ಪ್ರಾತಿನಿಧ್ಯವೆಂದು ಪರಿಗಣಿಸಲಾಗುತ್ತದೆ. ಒಳ್ಳೆಯದಾಗಲಿ ಎಂಬ ದೃಷ್ಟಿಯಿಂದ ಸಾಲಿಗ್ರಾಮವನ್ನು ಪೂಜಿಸಲಾಗುತ್ತದೆ. ಹಾಗಾದರೆ ಸಾಲಿಗ್ರಾಮ ಮನೆಯಲ್ಲಿದ್ದರೆ ಹೇಗೆ ಪೂಜಿಸಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ವಿಡಿಯೋ ನೋಡಿ.
ಹಿಂದೂ ಸಂಪ್ರದಾಯದಲ್ಲಿ, ನಮ್ಮ ಆಚಾರ-ವಿಚಾರಗಳಲ್ಲಿ ನಾವೆಲ್ಲರ ಕೂಡ ಜಗತ್ ಸರ್ವಂ ದೈವಾಧೀನಂ. ಅಂದರೆ ಜಗತ್ತು ದೈವದ ಅನುಗ್ರಹಲ್ಲಿದೆ. ನಾವುಗಳು ದೇವೋಪಾಸನೆಯಲ್ಲಿ ತೊಡಿಸಿಕೊಳ್ಳುತ್ತೇವೆ. ಅದರಲ್ಲೂ ಯಾತ್ರೆ ಅಥವಾ ಕ್ಷೇತ್ರಗಳಿಗೆ ಹೋದಾಗ ಒಂದಿಲ್ಲೊಂದು ವಸ್ತುವನ್ನು ತೆಗೆದುಕೊಂಡು ಬರುತ್ತೇವೆ. ಒಳ್ಳೆಯದಾಗಲಿ ಎಂಬ ದೃಷ್ಟಿಯಿಂದ ತೆಗೆದುಕೊಂಡು ಬರುವುದೇ ಸಾಲಿಗ್ರಾಮ (Saligrama). ಈ ಸಾಲಿಗ್ರಾಮವನ್ನು ಹಿಂದೂ ಸಂಪ್ರದಾಯದಲ್ಲಿ ವಿಷ್ಣುವಿನ ಪ್ರಾತಿನಿಧ್ಯವೆಂದು ಪರಿಗಣಿಸಲಾಗಿದೆ. ಇದನ್ನು ಪವಿತ್ರ ವಸ್ತುವಾಗಿ ಪೂಜಿಸಲಾಗುತ್ತದೆ. ಹಿಂದೂ ಪುರಾಣಗಳಲ್ಲಿ, ಭಗವಾನ್ ವಿಷ್ಣುವು ರಾಕ್ಷಸ ರಾಜ ಹಯಗ್ರೀವನನ್ನು ಸೋಲಿಸಲು ಸಾಲಿಗ್ರಾಮ ರೂಪವನ್ನು ತಾಳಿದ್ದರು ಎಂಬ ಪ್ರತಿತಿ ಇದೆ. ಹಾಗಾದರೆ ಸಾಲಿಗ್ರಾಮ ಮನೆಯಲ್ಲಿದ್ದರೆ ಹೇಗೆ ಪೂಜಿಸಬೇಕು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.