ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ಬೆಂಗಳೂರಿನ ಮತ್ತೆ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಯಲಹಂಕ ವಾಯುನೆಲೆ ಹಿಂದಿನ ಕೆರೆ ಪ್ರದೇಶದಲ್ಲಿ ಓಡಾಡುತ್ತಿರುವ ದೃಶ್ಯ ಕಟ್ಟಡ ಕಾರ್ಮಿಕರ ಮೊಬೈಲ್ನಲ್ಲಿ ಸೆರೆಯಾಗಿದೆ. ಸದ್ಯ ಈಗ ವಿಡಿಯೋ ವೈರಲ್ ಆಗಿದ್ದು, ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ.
ಬೆಂಗಳೂರು, (ಅಕ್ಟೋಬರ್ 29): ಬೆಂಗಳೂರಿನ ಹುಣಸಮಾರನಹಳ್ಳಿ ಬಳಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಯಲಹಂಕ ವಾಯುನೆಲೆ ಹಿಂದಿನ ಕೆರೆ ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಕಟ್ಟಡ ಕಾರ್ಮಿಕರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ವೈರಲ್ ಆಗಿದೆ. ಇದರಿಂದ ಜನರು ಆತಂಕಗೊಂಡಿದ್ದಾರೆ. ನೆಲ್ಲಕುಂಡೆ, ಗಂಡಿಗೆಹಳ್ಳಿ ನಡುವೆ ಸುಳಿದಾಡುತಿದೆ ಎಂದು ತಿಳಿದುಬಂದಿದ್ದು, ಕೂಡಲೇ ಸ್ಥಳೀಯರು ಯಲಹಂಕ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಳೆದ ಭಾನುವಾರವು ಸಹ ಚಿರತೆ ಪ್ರತ್ಯಕ್ಷವಾಗಿತ್ತು. ಇದೀಗ ಮತ್ತೊಮ್ಮೆ ಚಿರತೆ ಕಾಣಿಸಿಕೊಂಡಿದ್ದು, ಜನ ಭಯಭೀತರಾಗಿದ್ದಾರೆ.
ಟಿವಿ9ಗೆ ಹುಣಸಮಾರನಹಳ್ಳಿ ನಿವಾಸಿ ಸೆಬಾಸ್ಟಿಯನ್ ಪ್ರತಿಕ್ರಿಯಿಸಿದ್ದು, ಆಗಾಗ ಚಿರತೆ ಪ್ರತ್ಯಕ್ಷ ಆಗುತ್ತಿದೆ, ಭಾನುವಾರವೂ ಪ್ರತ್ಯಕ್ಷವಾಗಿತ್ತು. ಚಿರತೆ ಓಡಾಡುವುದನ್ನು ಕಾರ್ಮಿಕರು ವಿಡಿಯೋ ಮಾಡಿದ್ದಾರೆ. ಯಲಹಂಕ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದೀವಿ. ಬುಧವಾರದಿಂದ ಕಾರ್ಯಾಚರಣೆ ಮಾಡೋದಾಗಿ ಹೇಳಿದ್ದಾರೆ. ಪದೇಪದೆ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಭಯವಾಗ್ತಿದೆ. ಮಕ್ಕಳು ಹಾಗೂ ಮಹಿಳೆಯರು ಹೆಚ್ಚಾಗಿ ಇಲ್ಲಿ ಓಡಾಡುತ್ತಾರೆ. ಹುಣಸಮಾರನಹಳ್ಳಿಯಲ್ಲಿ ಬೆಳಗ್ಗೆ ಜನರು ವಾಕಿಂಗ್ ಬರ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು,