Loading video

ಕೆಆರ್ ಪೇಟೆ ಬಳಿ ಚಾಲಕನ ಹತೋಟಿ ತಪ್ಪಿ ಮರಕ್ಕೆ ಗುದ್ದಿದ ಕೆಎಸ್ಸಾರ್ಟಿಸಿ ಬಸ್, 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Updated on: Feb 13, 2025 | 11:48 AM

ಬಸ್ ನ ಬ್ರೇಕ್ ಫೇಲಾಯಿತೋ ಅಥವಾ ಮತ್ಯಾವುದೋ ಕಾರಣಕ್ಕೆ ಢಿಕ್ಕಿ ಸಂಭವಿಸಿತೋ ಅಂತ ಗೊತ್ತಾಗಿಲ್ಲ. ಬಸ್ಸಿನ ಚಾಲಕ ಓವರ್ ಟೈಮ್ ಕೆಲಸ ಮಾಡುತ್ತಿದ್ದರೆ ನಿದ್ರಾಹೀನತೆ ಅಥವಾ ವಿಶ್ರಾಂತಿರಹಿತ ಕೆಲಸದಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಕೆಎಸ್​ಆರ್​ಟಿಸಿಯಲ್ಲಿ ಚಾಲಕರ ಹುದ್ದೆಗಳಿಗೆ ಭರ್ತಿ ಕಾರ್ಯ ನಡೆಯಬೇಕಿದೆ, ಅವರ ಕೊರತೆಯಿಂದಾಗಿ ಚಾಲಕರು ಓವರ್ ಟೈಂ ಕೆಲಸ ಮಾಡುವ ಅನಿವಾರ್ಯತೆ ಇದೆಯೇ?

ಮಂಡ್ಯ: ಜಿಲ್ಲೆಯ ಆಲನಹಳ್ಳಿಯಿಂದ ಕೆಆರ್ ಪೇಟೆಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ವಾಮ್ಯಕ್ಕೆ ಒಳಪಟ್ಟ ಬಸ್ಸೊಂದು ಕುಂದನಹಳ್ಳಿ ಗೇಟ್ ಬಳಿ ಭೀಕರ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲವಾದರೂ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಲ್ಲಿ 20 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಜೋರಾಗಿ ಗುದ್ದಿದೆ. ಢಿಕ್ಕಿಯಾದ ರಭಸಕ್ಕೆ ಬಸ್ಸಿನ ಕ್ಯಾಬಿನ್ ಭಾಗ ನಜ್ಜುಗುಜ್ಜಾಗಿದೆ. ನಮ್ಮ ಮಂಡ್ಯ ವರದಿಗಾರ ನೀಡುವ ಮಾಹಿತಿ ಪ್ರಕಾರ ಬಸ್ಸಲ್ಲಿ ಶಾಲಾಮಕ್ಕಳು ಸಹ ಇದ್ದರು. ಗಾಯಗೊಂಡವರನ್ನು ಕೆಆರ್ ಪೇಟೆ ತಾಲ್ಲೂಕು ಅಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮದ್ದೂರು ಬಳಿ ಕೆಎಸ್ಸಾರ್ಟಿಟಿಸಿ ಬಸ್ಸು ಪಲ್ಟಿ, 33 ಜನರಿಗೆ ಗಾಯ