ನಾಳೆ ಗಣೇಶ ಚತುರ್ಥಿ ಹಬ್ಬ ಪ್ರಯುಕ್ತ ಊರುಗಳಿಗೆ ತೆರಳುತ್ತಿರುವ ಜನ, ಕೆಎಸ್​ಆರ್​ಟಿಸಿಯಿಂದ ಹೆಚ್ಚುವರಿ ಬಸ್​ಗಳು

ಅರುಣ್​ ಕುಮಾರ್​ ಬೆಳ್ಳಿ

Updated on: Aug 26, 2025 | 7:54 PM

ಬಳ್ಳಾರಿಗೆ ರಾತ್ರಿ 12 ಗಂಟೆಗೆ ಮುಟ್ಟುವ ಉದ್ದೇಶದಿಂದ ಈ ಬಸ್​ನಲ್ಲಿ ಪ್ರಯಾಣಿಸುತ್ತಿರುವ ವ್ಯಕ್ತಿಯೊಬ್ಬರು ಖಾಸಗಿ ಬಸ್​ ನವರು ಸಂದರ್ಭದ ಪ್ರಯೋಜನ ಪಡೆದು ಪ್ರಯಾಣಿಕರಿಂದ ದುಪ್ಪಟ್ಟು ಹಣವನ್ನು ಪೀಕುತ್ತಿದ್ದಾರಂತೆ. ಇದೇ ಬಸ್ಸಲ್ಲಿ ಪ್ರಯಾಣಿಸುತ್ತಿರುವ ಯುವತಿಯೊಬ್ಬರು ಮಹಿಳೆಯರಿಗೆ ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣದ ಅವಕಾಶವಿದ್ದರೂ ಹಬ್ಬದ ಅನಿವಾರ್ಯತೆಯಿಂದಾಗಿ ಲಕ್ಸುರಿ ಬಸ್ಸಲ್ಲಿ ದುಡ್ಡು ತೆತ್ತು ಚಳ್ಳಕೆರೆಗೆ ಪ್ರಯಾಣಿಸುತ್ತಿದ್ದಾರಂತೆ.

ಬೆಂಗಳೂರು, ಆಗಸ್ಟ್ 26 : ನಾಳೆ ವಿನಾಯಕ ಚತುರ್ಥಿ ಹಬ್ಬ. ಆದರೆ ಹಬ್ಬ ವಾರದ ನಡುವೆ ಬಂದಿರೋದ್ರಿಂದ ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರುಗೆ ಬಂದು ಬದುಕು ನಡೆಸುತ್ತಿರುವ ಲಕ್ಷಾಂತರ ಜನಕ್ಕೆ ಕೇವಲ ಒಂದು ದಿನದಮಟ್ಟಿಗೆ ಊರಿಗೆ ಬರುವಷ್ಟು ಮಾತ್ರ ಅವಕಾಶ. ಹಬ್ಬಕ್ಕೆ ಊರುಗಳಿಗೆ ತೆರಳುವ ಜನ ಜಾಸ್ತಿ ಅಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 1,500 ಹೆಚ್ಚುವರಿ ಬಸ್​ಗಳನ್ನು ಬೆಂಗಳೂರು ನಗರದಿಂದ ಬೇರೆ ಬೇರೆ ಊರುಗಳಿಗೆ ಓಡಿಸುತ್ತಿದೆ. ನಮ್ಮ ಬೆಂಗಳೂರು ವರದಿಗಾಗರ ತಮ್ಮ ಊರುಗಳಿಗೆ ಪ್ರಯಾಣಿಸುತ್ತಿರುವ ಜನರೊಂದಿಗೆ ಬಸ್ ಸೌಕರ್ಯ, ಪ್ರಯಾಣ ಅನಿವಾರ್ಯತೆ ಹಿನ್ನಲೆ ಖಾಸಗಿ ಬಸ್​ಗಳು ಸುಲಿಗೆಗಿಳಿದಿರುವುದು ಮೊದಲಾದ ಸಂಗತಿಗಳ ಬಗ್ಗೆ ಮಾತಾಡಿದ್ದಾರೆ.

ಇದನ್ನೂ ಓದಿ:  Ganesha Chaturthi Rituals: ಗಣೇಶ ಚತುರ್ಥಿಗೆ ಯಾವ ರೀತಿಯ ಮೂರ್ತಿ ಇಡಬೇಕು, ಹೇಗೆ ಮನೆಗೆ ತರಬೇಕು?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.