ಕುಜ-ರಾಹು ಸಂಯೋಗ ರಾಶಿಫಲ: ಕನ್ಯಾ ರಾಶಿಯವರಿಗೆ ಗುರುಬಲ ಇರುವುದರಿಂದ ಹೆಚ್ಚಿನ ಸಮಸ್ಯೆ ಎದುರಾಗಲ್ಲ

|

Updated on: May 15, 2024 | 12:59 PM

ಕುಜ-ರಾಹು ಸಂಯೋಗ ರಾಶಿಫಲ: ಕುಟುಂಬದದಲ್ಲಿ ಹೆಣ್ಣುಮಕ್ಕಳಿಗೆ ಶುಭ ಕಾದಿದೆ ಮತ್ತು ವಾಹನ ಯೋಗ ಚೆನ್ನಾಗಿದೆ, ಕೆಲಸದಲ್ಲಿ ಬಡ್ತಿ ಸಿಗುವ ಅವಕಾಶಗಳಿವೆ, ಈ ರಾಶಿಯವರು ತಾಮ್ರದ ಉಂಗುರವನ್ನು ಕಿಸೆಯಲ್ಲಿ ಇಟ್ಟುಕೊಲ್ಳುವುದು ಇಲ್ಲವೇ ಬೆರಳಿಗೆ ಧರಿಸುವುದು ಉತ್ತಮ. ಗೋಮೂತ್ರವನ್ನು ನೀರಲ್ಲಿ ಬೆರಸಿಕೊಂಡು ಸ್ನಾನ ಮಾಡಿದರೆ ಒಳಿತಾಗುತ್ತದೆ.

ಬೆಂಗಳೂರು: ಕುಜ-ರಾಹು ಸಂಯೋಗ ರಾಶಿಫಲ ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ಖ್ಯಾತ ಜ್ಯೋತಿಷಿ ಡಾ ಬಸವರಾಜ ಗುರೂಜಿ ಇಲ್ಲಿ ವಿಶ್ಲೇಷಿಸಿದ್ದಾರೆ. ಮೇ 15 ರಿಂದ ಜೂನ್ 1 ರವರೆಗೆ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಮೊದಲಾದ ಮಾಹಿತಿ ಇಲ್ಲಿದೆ.

ಕನ್ಯಾರಾಶಿ: ಈ ರಾಶಿಯವವರಿಎಗ ಮಾಂಗಲ್ಯ ಯೋಗವಿದೆ ಮತ್ತು ವಿವಾಹಕ್ಕೆ ಸಂಬಂಧಿಸಿದಂತೆ ಅಡೆತಡೆಗಳಿದ್ದರೆ ನಿವಾರಣೆಯಾಗುತ್ತದೆ. ಸಂಬಂಧಗಳು ಉತ್ತಮಗೊಳ್ಳುತ್ತವೆ ಅದರೆ ಈಗಾಗಲೇ ಮದುವೆಯಾಗಿರುವವರಿಗೆ ಮನಸ್ತಾಪಗಳು, ಸವಾಲುಗಳು ಎದುರಾಗಬಹುದು. ಕನ್ಯಾರಾಶಿಯವರಿಗೆ ಗುರುಬಲ ಇರುವುದದರಿಂದ ಹೆಚ್ಚಿನ ಸಮಸ್ಯೆಗಳೇನೂ ಉಂಟಾಗುವುದಿಲ್ಲ. ಪಾಲುದಾರಿಕೆಯಲ್ಲಿ ಲಾಭವಾಗಲಿದೆ, ಅಪವಾದಗಳಿಂದ ಮುಕ್ತರಾಗುವ ಯೋಗ ಮತ್ತು ವ್ಯಾಪಾರದಲ್ಲಿ ಪರಿವರ್ತನೆಯ ಸಾಧ್ಯತೆ ಇದೆ. ಕುಟುಂಬದದಲ್ಲಿ ಹೆಣ್ಣುಮಕ್ಕಳಿಗೆ ಶುಭ ಕಾದಿದೆ ಮತ್ತು ವಾಹನ ಯೋಗ ಚೆನ್ನಾಗಿದೆ, ಕೆಲಸದಲ್ಲಿ ಬಡ್ತಿ ಸಿಗುವ ಅವಕಾಶಗಳಿವೆ, ಈ ರಾಶಿಯವರು ತಾಮ್ರದ ಉಂಗುರವನ್ನು ಕಿಸೆಯಲ್ಲಿ ಇಟ್ಟುಕೊಲ್ಳುವುದು ಇಲ್ಲವೇ ಬೆರಳಿಗೆ ಧರಿಸುವುದು ಉತ್ತಮ. ಗೋಮೂತ್ರವನ್ನು ನೀರಲ್ಲಿ ಬೆರಸಿಕೊಂಡು ಸ್ನಾನ ಮಾಡಿದರೆ ಒಳಿತಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Cancer Horoscope: ಅಂಗಾರಕ ಯೋಗ ಸಂಯೋಗ; ಕರ್ಕಾಟಕ ರಾಶಿಗೆ ಗುರುಬಲ