ನೀರಿನಲ್ಲಿ ಭಕ್ತರೊಂದಿಗೆ ಆಟವಾಡುತ್ತಿರುವಾಗ ಅಡ್ಡಬಂದ ಸಿಬ್ಬಂದಿಯನ್ನ ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ

Edited By:

Updated on: Dec 03, 2025 | 5:13 PM

ಭಕ್ತರೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಡ್ಡ ಬಂದ ಸಿಬ್ಬಂದಿಯನ್ನು ಆನೆ ಎತ್ತಿ ಬಿಸಾಡಿರುವ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಹೌದು... ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಪ್ರಯುಕ್ತ ನಡೆದ ನೀರು ಬಂಡಿ ಉತ್ಸವದಲ್ಲಿ ಆನೆ ಯಶಸ್ವಿನಿ ಆಟವಾಡುತ್ತಿತ್ತು. ಭಕ್ತರೊಂದಿಗೆ ನೀರಿನಲ್ಲಿ ಚೆಲ್ಲಾಟವಾಡುತ್ತಿತ್ತು. ಈ ವೇಳೆ ದೇವಸ್ಥಾನದ ಸಿಬ್ಬಂದಿ ಅಡ್ಡಬಂದಿದ್ದಾನೆ. ಇದರಿಂದ ಕೆರಳಿದ ಆನೆ, ಸಿಬ್ಬಂದಿಯನ್ನು ಸೊಂಡಿಲಿನಿಂದ ಎತ್ತಿ ಸೈಡಿಗೆ ಬಿಸಾಡಿದೆ.

ಮಂಗಳೂರು, (ಡಿಸೆಂಬರ್ 03): ಭಕ್ತರೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಡ್ಡ ಬಂದ ಸಿಬ್ಬಂದಿಯನ್ನು ಹೇ ನಡಿಯೋ ಆಕಡೆ ಎಂದು ಆನೆ (elephant) ಎತ್ತಿ ಬಿಸಾಡಿರುವ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ (kukke subramanya) ನಡೆದಿದೆ. ಹೌದು… ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಪ್ರಯುಕ್ತ ನಡೆದ ನೀರು ಬಂಡಿ ಉತ್ಸವದಲ್ಲಿ ಆನೆ ಯಶಸ್ವಿನಿ ಆಟವಾಡುತ್ತಿತ್ತು. ಭಕ್ತರೊಂದಿಗೆ ನೀರಿನಲ್ಲಿ ಚೆಲ್ಲಾಟವಾಡುತ್ತಿತ್ತು. ಈ ವೇಳೆ ದೇವಸ್ಥಾನದ ಸಿಬ್ಬಂದಿ ಅಡ್ಡಬಂದಿದ್ದಾನೆ. ಇದರಿಂದ ಕೆರಳಿದ ಆನೆ, ಸಿಬ್ಬಂದಿಯನ್ನು ಸೊಂಡಿಲಿನಿಂದ ಎತ್ತಿ ಸೈಡಿಗೆ ಬಿಸಾಡಿದೆ. ಇದರಿಂದ ಸ್ಥಳದಲ್ಲಿ ಒಂದು ಕ್ಷಣ ಆತಂಕ ಸೃಷ್ಟಿಸಿತು. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಆನೆ ಆಟವಾಡುತ್ತಿರಬೇಕಾದ್ರೆ ಸಿಬ್ಬಂದಿ ಏಕೆ ಅಡ್ಡ ಹೋಗಬೇಕಿತ್ತು ಎಂದು ವಿಡಿಯೋ ನೋಡಿದವರ ಪ್ರಶ್ನೆಯಾಗಿದೆ.

Loading...
Unable to load recommendations.
Follow Us
ಅಶೋಕ್​ ಪೂಜಾರಿ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ನಿವಾಸಿಯಾದ ಅಶೋಕ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪೂರೈಸಿರುತ್ತಾರೆ. ಸ್ಥಳೀಯ ದಿನಪತ್ರಿಕೆಯ ಮೂಲಕ ವೃತ್ತಿರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಬಳಿಕ ಖಾಸಗಿ ಸುದ್ದಿ ವಾಹಿನಿಯಲ್ಲಿ ಉಡುಪಿ ಜಿಲ್ಲಾ ವರದಿಗಾರರಾಗಿ ಕೆಲಕಾಲ ಸೇವೆ ಸಲ್ಲಿಸಿರುತ್ತಾರೆ. ನಂತರ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆರು ವರ್ಷಗಳ ಕಾಲ ದಿಗ್ವಿಜಯ ನ್ಯೂಸ್ ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿ ನಂತರ ಟಿವಿ9 ಸುದ್ದಿ ವಾಹಿನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ರಂಗದಲ್ಲಿ ಇವರು ನೀಡಿದ ಸೇವೆಗೆ indiatelevision.com 2020ರಲ್ಲಿ ಅತ್ಯುತ್ತಮ ವರದಿಗಾರ ಎಂಬ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

Read More