‘ಅಂದು ನೀವೇ ಸಿಎಂ ಆಗಿ ಅಂದಿದ್ದೆ, ಆಗದ್ದಕ್ಕೆ ಕಾಂಗ್ರೆಸ್ಸಿಗರೇ ಕಾರಣ’: ಡಾ. ಪರಮೇಶ್ವರ್‌ಗೆ ಹೆಚ್.ಡಿ.ಕುಮಾರಸ್ವಾಮಿ ಟಾಂಗ್
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಡಿಸಿಎಂ ಪರಮೇಶ್ವರ್‌ಗೆ ಸಿಎಂ ಸ್ಥಾನ ಕೈತಪ್ಪಿದ ವಿಚಾರಕ್ಕೆ ಕಾಂಗ್ರೆಸ್ ಪಕ್ಷವನ್ನು ದೂರಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಮಾರ ಕೃಪಾವನ್ನು ತಮ್ಮ ಮನೆಯನ್ನಾಗಿಸಿಕೊಂಡಿರುವ ಮತ್ತು ನೀತಿ ಆಯೋಗ ಸಭೆಯಲ್ಲಿ ರಾಜ್ಯದ ಯೋಜನೆಗಳ ಬಗ್ಗೆ ಮಾತನಾಡಿದ್ದರ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ, "ಎಂಟು ವರ್ಷ ನಾನೇ ಸಿಎಂ" ಎಂಬ ಹೇಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜೂ.12: ತಮಗೆ ಮುಖ್ಯಮಂತ್ರಿ ಆಗುವ ಅವಕಾಶ ಕೈತಪ್ಪಿದ ಕುರಿತು ಸಚಿವ ಡಾ. ಜಿ. ಪರಮೇಶ್ವರ್ ಇತ್ತೀಚೆಗೆ ನೀಡಿದ್ದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಯನ್ನು ನೀಡಿದ್ದಾರೆ. ‘ಡಾ. ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ಕೈತಪ್ಪಲು ಅವರದೇ ಪಕ್ಷದವರಾದ ಕಾಂಗ್ರೆಸ್ಸಿಗರೇ ನೇರ ಕಾರಣ, ಈ ಬಗ್ಗೆ ಪರಮೇಶ್ವರ್ ಅವರು ನಮ್ಮನ್ನು ಕೇಳುವ ಬದಲು ಮೊದಲು ತಮ್ಮದೇ ಪಕ್ಷದವರ ಜೊತೆ ಕೂತು ಚರ್ಚೆ ಮಾಡಲಿ. ಅಂದು ಅವರು ನನ್ನ ಜೊತೆ ಬಂದಾಗ ನಾನು ಸಿಎಂ ಆಗಬೇಡಿ ಅಂತಾ ಹೇಳಿದ್ನಾ? ನೀವೇ ಮುಖ್ಯಮಂತ್ರಿಯಾಗಿ ಎಂದು ನಾನೇ ಖುದ್ದಾಗಿ ಹೇಳಿದ್ದೆ. ನೀವೇ ಸಿಎಂ ಆಗಿ ಎಂದಾಗಲೂ ಅವರು ಆಗಲಿಲ್ಲವಲ್ಲ ಎಂದು ಟಾಂಗ್ ನೀಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jun 12, 2026 04:12 PM
Follow Us
