ಕುಮಾರಸ್ವಾಮಿಯವರ ಹಾರ್ಟ್ ಆಪರೇಶನ್ ಯಶಸ್ವೀಯಾಗಿ ನಡೆದಿದೆ, ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ: ಹೆಚ್ ಡಿ ರೇವಣ್ಣ
ದೇಶದೆಲ್ಲೆಡೆ ಮತ್ತೇ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯಾಗಿ ಮಾಡುವುದಕ್ಕಾಗಿ ಜನ ತವಕಿಸುತ್ತಿರುವ ಸಮಯದಲ್ಲಿ ರಾಜ್ಯದ ಎರಡು ಶಕ್ತಿಕೇಂದ್ರಗಳೆನಿಸಿಕೊಂಡಿರುವ ಹೆಚ್ ಡಿ ದೇವೇಗೌಡ ಮತ್ತು ಬಿಎಸ್ ಯಡಿಯೂರಪ್ಪ ಕೈಜೋಡಿಸಿದ್ದಾರೆ. ಹಾಸನ ಕ್ಷೇತ್ರದ ಅಭ್ಯರ್ಥಿಯಾಗಲಿರುವ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಲು ಖುದ್ದು ಯಡಿಯೂರಪ್ಪನವರೇ ಬರೋದಾಗಿ ಹೇಳಿದ್ದಾರೆ ಎಂದು ರೇವಣ್ಣ ಹೇಳಿದರು.
ಬೆಂಗಳೂರು: ಜೆಡಿಎಸ್ ಮುಖಂಡ ಹೆಚ್ ಡಿ ರೇವಣ್ಣ (HD Revanna) ಇಂದು ತಮ್ಮ ಮಗ ಮತ್ತು ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜೊತೆ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪನವರ ಮನಗೆ ಭೇಟಿ ನೀಡಿದರು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರೇವಣ್ಣ, ದೇಶದೆಲ್ಲೆಡೆ ಮತ್ತೇ ನರೇಂದ್ರ ಮೋದಿಯವರನ್ನು (PM Narendra Modi) ಪ್ರಧಾನ ಮಂತ್ರಿಯಾಗಿ ಮಾಡುವುದಕ್ಕಾಗಿ ಜನ ತವಕಿಸುತ್ತಿರುವ ಸಮಯದಲ್ಲಿ ರಾಜ್ಯದ ಎರಡು ಶಕ್ತಿಕೇಂದ್ರಗಳೆನಿಸಿಕೊಂಡಿರುವ ಹೆಚ್ ಡಿ ದೇವೇಗೌಡ ಮತ್ತು ಬಿಎಸ್ ಯಡಿಯೂರಪ್ಪ ಕೈಜೋಡಿಸಿದ್ದಾರೆ. ಹಾಸನ ಕ್ಷೇತ್ರದ ಅಭ್ಯರ್ಥಿಯಾಗಲಿರುವ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಮಾಡಲು ಖುದ್ದು ಯಡಿಯೂರಪ್ಪನವರೇ ಬರೋದಾಗಿ ಹೇಳಿದ್ದಾರೆ ಎಂದು ರೇವಣ್ಣ ಹೇಳಿದರು. ನಂತರ ಇಂದು ಹೃದಯ ಶಸ್ತ್ರಚಿಕಿತ್ಸೆಗೊಳಗಾಗ ಹೆಚ್ ಡಿ ಕುಮಾರಸ್ವಾಮಿಯವರ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ರೇವಣ್ಣ ಇಂದು ಬೆಳಗ್ಗೆ ಹತ್ತು ಗಂಟೆಗೆ ಯಶಸ್ವೀಯಾಗಿ ಅವರ ಆಪರೇಶನ್ ಆಗಿದೆ, ರಾಜ್ಯದ ಎಲ್ಲ ಜನರ ಪ್ರೀತಿ ಪಡೆದುಕೊಂಡಿರುವ ಅವರು ನಿಜಕ್ಕೂ ಅದೃಷ್ಟಶಾಲಿಗಳು, ಒಂದರಡು ದಿನಗಳ ಬಳಿವ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ ಮತ್ತು ಮಾರ್ಚ್ 25 ರಂದು ಅವರು ಹಾಸನದಲ್ಲಿ ಒಂದು ಜಂಟಿ ಸಭೆಯನ್ನು ನಡೆಸಲಿದ್ದಾರೆ ಎಂದು ರೇವಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ