ಕುಮಾರಸ್ವಾಮಿಗೆ ಜವಾಬ್ದಾರಿ ಇಲ್ವಾ? ವೈಯಕ್ತಿಕ ಹಿತಾಸಕ್ತಿ ಬಿಟ್ಟು ರಾಜ್ಯದ ಬಗ್ಗೆ ಯೋಚಿಸಲಿ: ಶಿವಕುಮಾರ್
ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಬಜೆಟ್ ಮಂಡನೆಗೆ ಮೊದಲು ದೆಹಲಿಗೆ ತೆರಳಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ತಮ್ಮ ರಾಜ್ಯಗಳಿಗೆ ಅವಶ್ಯಕತೆಯಿರುವುದನ್ನು ಪ್ರಸ್ತಾಪಿಸಿದ್ದಾರೆ ಅದರೆ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಸಚಿವೆಯನ್ನು ಭೇಟಿಯಾಗಿಲ್ಲ ಎಂದಿದ್ದಕ್ಕೆ ಶಿವಕುಮಾರ್ ಅದನ್ನು ಮುಖ್ಯಮಂತ್ರಿಯವರನ್ನೇ ಕೇಳಿ ಎಂದು ಹೇಳಿದರು.
ರಾಮನಗರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಸಿಗದ ಕೊಡುಗೆಗಳ ಬಗ್ಗೆ ಮಾತಾಡಿದ ಡಿಕೆ ಶಿವಕುಮಾರ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ಟೀಕಿಸಿದರು. ರಾಜ್ಯದ ಮಿನಿಸ್ಟ್ರುಗಳು ಸಚಿವೆಯನ್ನು ಭೇಟಿಯಾಗದ ಬಗ್ಗೆ ಕುಮಾರಸ್ವಾಮಿ ಯಾಕೆ ಮಾತಾಡುತ್ತಾರೆ? ರಾಜ್ಯದ ಕೆಲ ಸಚಿವರು ಮತ್ತು ತಾನು ಹಣಕಾಸು ಸಚಿವೆ ಮತ್ತು ಪ್ರಧಾನಿಯವರನ್ನು ಭೇಟಿಯಾಗಿದ್ದೇವೆ, ತಮ್ಮ ವಿಚಾರ ಹಾಗಿರಲಿ, ರಾಜ್ಯದಿಂದ ಸಂಸತ್ತಿಗೆ ಆಯ್ಕೆಯಾಗಿ ಮಂತ್ರಿಯಾಗಿರುವ ಕುಮಾರಸ್ವಾಮಿಯವರಿಗೆ ಜವಾಬ್ದಾರಿ ಇಲ್ಲವೇ? ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ರಾಜ್ಯದ ಅಭ್ಯುದಯದ ಬಗ್ಗೆ ಯೋಚನೆ ಮಾಡಲಿ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ