Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲ ವಿಚಾರಗಳನ್ನು ಪಕ್ಷದ 4 ಗೋಡೆಗಳೊಳಗೆ ಮಾತ್ರ ಚರ್ಚಿಸಬೇಕೆಂದು ಉಸ್ತುವಾರಿ ಸೂಚಿಸಿದ್ದಾರೆ: ಆರ್ ಅಶೋಕ

ಎಲ್ಲ ವಿಚಾರಗಳನ್ನು ಪಕ್ಷದ 4 ಗೋಡೆಗಳೊಳಗೆ ಮಾತ್ರ ಚರ್ಚಿಸಬೇಕೆಂದು ಉಸ್ತುವಾರಿ ಸೂಚಿಸಿದ್ದಾರೆ: ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 07, 2025 | 3:12 PM

ರಾಜ್ಯದ ಬಿಜೆಪಿ ನಾಯಕರೆಲ್ಲ ಒಗ್ಗೂಡಿದರೆ ಆಡಳಿತ ನಡೆಸುತ್ತಿರುವ ಭ್ರಷ್ಟ, ಹಗರಣಗಳಿಂದ ಆವರಿಸಿಕೊಂಡಿರುವ, 60 ಪರ್ಸೆಂಟ್ ಕಾಂಗ್ರೆಸ್ ಸರ್ಕಾರವನ್ನು ಬಗ್ಗು ಬಡಿಯಬಹುದು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇರುವುದರಿಂದ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾರೆ, ಇದನ್ನು ಆರಂಭದಲ್ಲ್ಲೇ ನಿಲ್ಲಿಸಬೇಕಿತ್ತು, ರೆಡ್ಡಿಯವರು ಹೇಳಿದ್ದನ್ನು ಎಲ್ಲರೂ ಪಾಲಿಸುತ್ತೇವೆ ಎಂದು ಅಶೋಕ ಹೇಳಿದರು.

ಬೆಂಗಳೂರು: ಕರ್ನಾಟಕದ ಬಿಜೆಪಿ ಸಹ-ಉಸ್ತುವಾರಿ ಸುಧಾಕರ್ ರೆಡ್ಡಿ ಅವರು ರಾಜ್ಯ ಬಿಜೆಪಿ ನಾಯಕರ ಜೊತೆ ಸಭೆ ನಡೆಸಿದ ಬಳಿಕ ವಿರೋಧ ಪಕ್ಷದ ನಾಯಕ ಅರ್ ಅಶೋಕ್ ಮಾಧ್ಯಮಗಳ ಜೊತೆ ಮಾತಾಡಿದರು. ಪಕ್ಷದ ಯಾವುದೇ ಮುಖಂಡ, ಕಾರ್ಯಕರ್ತ ಆಂತರಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಾತಾಡುವಂತಿಲ್ಲ, ತಮ್ಮ ದೂರು ದುಮ್ಮಾನಗಳನ್ನು ಪಕ್ಷದ ನಾಲ್ಕು ಗೋಡೆಗಳ ನಡುವೆ ಮಾತ್ರ ಹೇಳಿಕೊಳ್ಳಬೇಕು ಎಂದು ಉಸ್ತುವಾರಿ ರೆಡ್ಡಿಯವರು ಎಲ್ಲರಿಗೂ ಸ್ಪಷ್ಟವಾದ ಸೂಚನೆ ನೀಡಿದ್ದಾರೆ, ಇದು ತನ್ನ ಮತ್ತು ಕೇಂದ್ರದ ವರಿಷ್ಠರ ಅನಿಸಿಕೆಯೂ ಆಗಿದೆ ಅಂತ ಅಶೋಕ ಹೇಳಿದರು. ಬಿಜೆಪಿಯಲ್ಲಿ ಇಂಥ ವಿದ್ಯಮಾನ ನಡೆಯಬಾರದಿತ್ತು, ಅದರೆ ದುರದೃಷ್ಟವಶಾತ್ ನಡೆದು ಹೋಗಿದೆ, ಇನ್ನೆರಡು ವಾರಗಳ ಅವಧಿಯಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ಕೈ’ಯಲ್ಲಿ ಕಂಪನ ಎಬ್ಬಿಸಿದ ಅಶೋಕ್ ಭವಿಷ್ಯ: ಕಾಂಗ್ರೆಸ್ ನಾಯಕರಿಂದ ವಾಗ್ದಾಳಿ