ಕುಮಾರಸ್ವಾಮಿ ಸಹೋದರ ಬಾಲಕೃಷ್ಣೇಗೌಡಗೆ ಸಾವಿರಾರು ಕೋಟಿ ರೂ. ಆಸ್ತಿ ಎಲ್ಲಿಂದ ಬಂತು? ಹೆಚ್ ಸಿ ಬಾಲಕೃಷ್ಣ, ಮಾಗಡಿ ಶಾಸಕ

|

Updated on: Oct 25, 2023 | 3:01 PM

ಕುಮಾರಸ್ವಾಮಿ ಮೊದಲನೇ ಸಲ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ಹಣ ವಸೂಲಿ ಮಾಡಿ, ದಂಧೆಯಲ್ಲಿ ತೊಡಗಿಸಿ ಕೋಟಿಗಟ್ಟಲೆ ಸಂಪಾದಿಸಿದ್ದಾರೆ ಎಂದು ಬಾಲಕೃಷ್ಣ ನೇರವಾಗಿ ಆರೋಪಿಸಿದರು. ಕಾಂಗ್ರೆಸ್ ಪಕ್ಷದ ಹಲವಾರು ಶಾಸಕರು ತಮ್ಮದೇ ಆದ ಬಿಸಿನೆಸ್ ಹೊಂದಿದ್ದಾರೆ. ಹಾಗಾಗಿ, ಕುಮಾರಸ್ವಾಮಿ ಹತಾಷರಾಗಿ ಮಾತಾಡುವುದನ್ನು ನಿಲ್ಲಿಸಬೇಕು ಎಂದು ಮಾಗಡಿ ಶಾಸಕ ಹೇಳಿದರು.

ಬೆಂಗಳೂರು: ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ (HC Balakrishna) ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಗೆ (HD Kumaraswamy) ಕೆಲ ನೇರ ಮತ್ತು ಸಂದಿಗ್ಧತೆಗೆ ಸಿಲುಕಿಸುವ ಪ್ರಶ್ನೆಗಳನ್ನು ಕೇಳಿದರು. ಬೇರೆಯವರ ಗಳಿಕೆಗಳು ಅಕ್ರಮ ಎಂದು ಹೇಳುವ ಕುಮಾರಸ್ವಾಮಿ, ತಮ್ಮ ಸಹೋದರ ಹೆಚ್ ಡಿ ಬಾಲಕೃಷ್ಣೇಗೌಡ (HD Balakrishne Gowda) ಸಾವಿರಾರು ಕೋಟಿ ರೂ. ಗಳ ಒಡೆಯ ಆಗಿದ್ದು ಹೇಗೆ ಅಂತ ಪ್ರಾಮಾಣಿಕತೆಯಿಂದ ಹೇಳುತ್ತಾರಾ? ಒಬ್ಬ ರೈತನಾಗಿರುವ ಬಾಲಕೃಷ್ಣೇಗೌಡ ಆಲೂಗಡ್ಡೆ, ಈರುಳ್ಳಿ ಬೆಳೆದು ಕೋಟಿಗಟ್ಟಲೆ ಸಂಪಾದನೆ ಮಾಡಿದ್ದಾರಾ? ಅವರಿಗೆ ಆಸ್ತಿ ವಿವರ ಪಡೆಯುವಂತೆ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯುತ್ತಾರಾ? ಎಂದು ಬಾಲಕೃಷ್ಣ ಕೇಳಿದರು. ಕುಮಾರಸ್ವಾಮಿ ಮೊದಲನೇ ಸಲ ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಇಲಾಖೆಗಳ ಅಧಿಕಾರಿಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ಹಣ ವಸೂಲಿ ಮಾಡಿ, ದಂಧೆಯಲ್ಲಿ ತೊಡಗಿಸಿ ಕೋಟಿಗಟ್ಟಲೆ ಸಂಪಾದಿಸಿದ್ದಾರೆ ಎಂದು ಬಾಲಕೃಷ್ಣ ನೇರವಾಗಿ ಆರೋಪಿಸಿದರು. ಡಿಕೆ ಶಿವಕುಮಾರ್ ಒಬ್ಬ ಉದ್ಯಮಿಯಾಗಿದ್ದು ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೊಬ್ಬರೇ ಅಂತಲ್ಲ, ಕಾಂಗ್ರೆಸ್ ಪಕ್ಷದ ಹಲವಾರು ಶಾಸಕರು ತಮ್ಮದೇ ಆದ ಬಿಸಿನೆಸ್ ಹೊಂದಿದ್ದಾರೆ. ಹಾಗಾಗಿ, ಕುಮಾರಸ್ವಾಮಿ ಹತಾಷರಾಗಿ ಮಾತಾಡುವುದನ್ನು ನಿಲ್ಲಿಸಬೇಕು ಎಂದು ಮಾಗಡಿ ಶಾಸಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ